ಸೋಮವಾರ, ಆಗಸ್ಟ್ 26, 2019
28 °C

ಹುಂಡೈ ಕೋನಾ ಎಲೆಕ್ಟ್ರಿಕ್‌ ಬೆಲೆ ₹ 1.59 ಲಕ್ಷ ಇಳಿಕೆ

Published:
Updated:
Prajavani

ನವದೆಹಲಿ: ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ತನ್ನ ವಿದ್ಯುತ್‌ ಚಾಲಿತ ಎಸ್‌ಯುವಿ ಕೋನಾ ಎಲೆಕ್ಟ್ರಿಕ್‌ ಬೆಲೆಯಲ್ಲಿ
₹ 1.59 ಲಕ್ಷ ಇಳಿಕೆ ಮಾಡಿದೆ.

ಇದರಿಂದ ಕೋನಾ ಬೆಲೆ ₹ 25.3 ಲಕ್ಷದಿಂದ ₹ 23.71 ಲಕ್ಷಕ್ಕೆ ಇಳಿಕೆಯಾಗಿದೆ. ಆಗಸ್ಟ್ 1 ರಿಂದಲೇ ಹೊಸ ದರ ಅನ್ವಯವಾಗಿದೆ ಎಂದು ತಿಳಿಸಿದೆ

ಜಿಎಸ್‌ಟಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ 152 ಕಾರುಗಳಿಗೆ ಬುಕಿಂಗ್‌ ಆಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

Post Comments (+)