ಬೆಂಗಳೂರು: ದೇಶದ ಶ್ರೀಮಂತರನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪಿಸಿರುವ ‘ಕೋಟಕ್ ಸಾಲಿಟೇರ್’ ಯೋಜನೆಯನ್ನು ಕೋಟಕ್ ಮಹೀಂದ್ರ ಬ್ಯಾಂಕ್ ಅನಾವರಣ ಮಾಡಿದೆ. ಇದರ ವಿಶೇಷವೆಂದರೆ, ಯಾರಿಗೆ ಆಹ್ವಾನ ಇದೆಯೋ ಅವರು ಮಾತ್ರ ಇದರ ಪ್ರಯೋಜನ ಪಡೆಯಬಹುದು.

‘ಕೋಟಕ್ ಮಹೀಂದ್ರ ಬ್ಯಾಂಕ್ ಜೊತೆ ಗಾಢವಾದ, ಬಹುಆಯಾಮಗಳ ಆರ್ಥಿಕ ಸಂಬಂಧ ಹೊಂದಿರುವ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಮಾತ್ರ ಇದು ಸೀಮಿತ’ ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.

‘ಭಾರತದಲ್ಲಿ ಶ್ರೀಮಂತ ವರ್ಗವು ವೇಗವಾಗಿ ಬೆಳೆಯುತ್ತಿದೆ. ಆದರೆ ಅವರ ಬೆಳವಣಿಗೆ ವೇಗಕ್ಕೆ ತಕ್ಕಂತೆ ಅವರಿಗೆ ಬ್ಯಾಂಕಿಂಗ್ ಸೇವೆಗಳು ದೊರೆಯುತ್ತಿಲ್ಲ. ಸಾಲಿಟೇರ್ ಯೋಜನೆಯು ಈ ಕೊರತೆಯನ್ನು ಪೂರೈಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ. ಸಾಲಿಟೇರ್ ಯೋಜನೆಯು ಯಶಸ್ಸನ್ನು ಗುರುತಿಸುತ್ತದೆ, ಮಹತ್ವಾಕಾಂಕ್ಷೆಗೆ ಗೌರವ ಸಲ್ಲಿಸುತ್ತದೆ ಮತ್ತು ಬ್ಯಾಂಕಿಂಗ್ ಸೇವೆ ಹೇಗಿರಬೇಕು ಎಂಬುದರ ಪರಿಕಲ್ಪನೆಯನ್ನು ಮರುರೂಪಿಸುವ ಪ್ರಯತ್ನ ಮಾಡುತ್ತದೆ’ ಎಂದು ಕೋಟಕ್ ಮಹೀಂದ್ರ ಬ್ಯಾಂಕ್ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ರೋಹಿತ್ ಭಾಸಿನ್ ಹೇಳಿದ್ದಾರೆ.

ಸಾಲಿಟೇರ್ ಯೋಜನೆಯ ಅಡಿಯಲ್ಲಿ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ವಿಭಾಗಗಳಲ್ಲಿ ₹8 ಕೋಟಿ ಪ್ರೀ-ಅಪ್ರೂವ್ಡ್ ಸಾಲ ಸೌಲಭ್ಯ ಲಭ್ಯವಿರುತ್ತದೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ಹಾಗೂ ನೆರವು ಒದಗಿಸಲು ಸೇವಾ ನಿರ್ವಾಹಕರು ಇರುತ್ತಾರೆ ಎಂದು ಪ್ರಕಟಣೆ ಹೇಳಿದೆ.