ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಕ್‌ ಮಹೀಂದ್ರ ಬ್ಯಾಂಕ್‌ ಲಾಭ ಶೇ 24ರಷ್ಟು ಹೆಚ್ಚಳ

Published 21 ಅಕ್ಟೋಬರ್ 2023, 11:44 IST
Last Updated 21 ಅಕ್ಟೋಬರ್ 2023, 11:44 IST
ಅಕ್ಷರ ಗಾತ್ರ

ನವದೆಹಲಿ: ಕೋಟಕ್ ಮಹೀಂದ್ರ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 24ರಷ್ಟು ಹೆಚ್ಚಾಗಿ ₹3,191 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭವು ₹2,581 ಕೋಟಿಯಷ್ಟು ಇತ್ತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಆದಾಯ ಹೆಚ್ಚಳ ಮತ್ತು ಸುಸ್ತಿ ಸಾಲದ ಪ್ರಮಾಣ ಕಡಿಮೆ ಆಗಿರುವುದೇ ಲಾಭದಲ್ಲಿ ಹೆಚ್ಚಳಕ್ಕೆ ಕಾರಣ ಎಂದು ಹೇಳಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ವರಮಾನವು ₹9,925 ಕೋಟಿಯಿಂದ ₹13,507 ಕೋಟಿಗೆ ಏರಿಕೆ ಕಂಡಿದೆ. ನಿವ್ವಳ ಬಡ್ಡಿ ಆದಾಯ ಶೇ 23ರಷ್ಟು ಹೆಚ್ಚಾಗಿ ₹6,297 ಕೋಟಿಗೆ ತಲುಪಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಶೇ 2.08ರಿಂದ ಶೇ 1.72ಕ್ಕೆ ಇಳಿಕೆ ಕಂಡಿದೆ. ನಿವ್ವಳ ಎನ್‌ಪಿಎ ಶೇ 0.55 ರಿಂದ ಶೇ 0.37ಕ್ಕೆ ತಗ್ಗಿದೆ ಎಂದು ಬ್ಯಾಂಕ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT