ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಆ್ಯಂಡ್‌ಟಿ ಲಾಭ ಏರಿಕೆ

ಎಂಜಿನಿಯರಿಂಗ್ ಮತ್ತು ನಿರ್ಮಾಣ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಎಲ್‌ಆ್ಯಂಡ್‌ಟಿ
Published 10 ಮೇ 2023, 16:10 IST
Last Updated 10 ಮೇ 2023, 16:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಂಜಿನಿಯರಿಂಗ್ ಮತ್ತು ನಿರ್ಮಾಣ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಎಲ್‌ಆ್ಯಂಡ್‌ಟಿ, ಮಾರ್ಚ್‌ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, ಕಂಪನಿಯ ನಿವ್ವಳ ಲಾಭವು ₹3,986 ಕೋಟಿಗೆ ಏರಿಕೆ ಆಗಿದೆ.

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹3,621 ಕೋಟಿ ನಿವ್ವಳ ಲಾಭ ಗಳಿಸಿತ್ತು. ಕಂಪನಿಯ ವರಮಾನವು ಶೇಕಡ 10ರಷ್ಟು, ಒಟ್ಟು ವೆಚ್ಚಗಳು ಶೇ 11ರಷ್ಟು ಹೆಚ್ಚಳ ಕಂಡಿವೆ. ಆಡಳಿತ ಮಂಡಳಿಯು ‍ಪ್ರತಿ ಷೇರಿಗೆ ₹24ರಷ್ಟು ಅಂತಿಮ ಡಿವಿಡೆಂಡ್ ಘೋಷಿಸಿದೆ.

ಕಂಪನಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷ ಎ.ಎಂ. ನಾಯ್ಕ್ ಅವರು ಸೆಪ್ಟೆಂಬರ್ 30ರಿಂದ ಅನ್ವಯವಾಗುವಂತೆ ತಮ್ಮ ಸ್ಥಾನ ತ್ಯಜಿಸಲಿದ್ದಾರೆ ಎಂದು ಕಂಪನಿ ಹೇಳಿದೆ. ಅವರು ಕಂಪನಿಯ ಗೌರವಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT