ಲೆಮನ್ ಟ್ರೀ ಹೋಟೆಲ್ಸ್ ಕಂಪನಿಯ ಷೇರು ಬೆಲೆಯು ₹165ಕ್ಕೆ ತಲುಪಬಹುದು ಎಂದು ಜೆಎಂ ಫೈನಾನ್ಶಿಯಲ್ಸ್ ಹೇಳಿದೆ.

ಲೆಮನ್ ಟ್ರೀ ಹೋಟೆಲ್ಸ್ ಕಂಪನಿಯು ಡಿಸೆಂಬರ್ ತ್ರೈಮಾಸಿಕದಲ್ಲಿ ₹410 ಕೋಟಿ ವರಮಾನ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14ರಷ್ಟು ಹೆಚ್ಚು, ಹಿಂದಿನ ತ್ರೈಮಾಸಿಕದ ವರಮಾನಕ್ಕೆ ಹೋಲಿಸಿದರೆ ಶೇ 33ರಷ್ಟು. ಹೋಟೆಲ್ನ ಕೊಠಡಿಗಳ ಸರಾಸರಿ ದರವು ಶೇ 11ರಷ್ಟು ಹೆಚ್ಚಾಗಿ, ಕೊಠಡಿಗಳ ಬಳಕೆ ಪ್ರಮಾಣವು ಶೇ 73.4ರಷ್ಟು ಆಗಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಕಂಪನಿಯ ವರಮಾನವು ₹1,030 ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ಒಂಬತ್ತು ತಿಂಗಳ ಅವಧಿಯಲ್ಲಿ ಕಂಪನಿ ಗಳಿಸಿದ ವರಮಾನಕ್ಕೆ ಹೋಲಿಸಿದರೆ ಶೇ 13ರಷ್ಟು ಹೆಚ್ಚು ಎಂದು ಜೆಎಂ ಫೈನಾನ್ಶಿಯಲ್ಸ್ನ ವರದಿಯಲ್ಲಿ ವಿವರಿಸಲಾಗಿದೆ.

2026–27ರಿಂದ ಕಂಪನಿಯ ಲಾಭದ ಪ್ರಮಾಣ ಹೆಚ್ಚಳ ಕಾಣಲಿದೆ ಎಂದು ಆಡಳಿತ ಮಂಡಳಿ ಹೇಳಿದೆ. ನವೀಕರಣ ಆಗಿರುವ ಕೆಲವು ಹೋಟೆಲ್ಗಳ ಸಾಧನೆಯನ್ನು ಕಂಡಾಗ ಈ ಮಾತಿಗೆ ಪುಷ್ಟಿ ಸಿಗುತ್ತದೆ. ಕಂಪನಿಯ ವರಮಾನದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು 2027–28ರ ವರೆಗೆ ಶೇ 12ರಷ್ಟು, ತೆರಿಗೆ ನಂತರದ ಲಾಭದ ಸಿಎಜಿಆರ್ ಪ್ರಮಾಣ ಶೇ 20ರಷ್ಟು ಇರುವ ನಿರೀಕ್ಷೆ ಇದೆ ಎಂದು ಅದು ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಕಂಪನಿಯ ಷೇರು ಮೌಲ್ಯವು ₹133.90 ಆಗಿತ್ತು.

(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.