ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ತಗ್ಗಿಸಿದ್ದರೂ, ಬ್ಯಾಂಕ್ ಸಾಲಗಳ ಬಡ್ಡಿ ದರಗಳು ಏರುಗತಿಯಲ್ಲಿ ಇವೆ ಎಂದು ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ತಿಳಿಸಿದೆ.

ಆರ್ಬಿಐ ಇದುವರೆಗೆ ಶೇ 1.10ರಷ್ಟು ರೆಪೊ ದರ ತಗ್ಗಿಸಿದ್ದರೂ ಬ್ಯಾಂಕ್ಗಳ ವಿವಿಧ ಸಾಲಗಳು ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. ರೆಪೊ ದರ ಕಡಿತದ ಪ್ರಯೋಜನವನ್ನು ಸಾಲಗಾರರಿಗೆ ವರ್ಗಾಯಿಸಿಲ್ಲ. ಸಾಲಗಳು ಅಗ್ಗವಾಗುವ ಬದಲಿಗೆ ಏಪ್ರಿಲ್ನಿಂದೀಚೆಗೆ ತುಟ್ಟಿಯಾಗಿವೆ. ಸಾಲದ ಬಡ್ಡಿ ದರಗಳು ಸರಾಸರಿ ಶೇ 0.08ರಷ್ಟು ಏರಿಕೆಯಾಗಿವೆ. ಇದಕ್ಕೆ ಹಣದುಬ್ಬರ ಪರಿಗಣಿಸಿರುವುದು ಮತ್ತು ಕುಸಿಯುತ್ತಿರುವ ಆರ್ಥಿಕ ಪ್ರಗತಿಯೇ ಕಾರಣ ಎಂದು ಮೆರಿಲ್ ಲಿಂಚ್ನ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ವೃದ್ಧಿ ದರವು 6 ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿದೆ. ನಂತರದ ದಿನಗಳಲ್ಲಿಯೂ ಆರ್ಥಿಕತೆಯ ಎಲ್ಲ ಪ್ರಮುಖ ವಲಯಗಳಲ್ಲಿ ಕುಸಿತ ಕಂಡುಬರುತ್ತಿರುವುದರಿಂದ ವೃದ್ಧಿ ದರ ಇನ್ನಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.