ಬೆಂಗಳೂರು: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮೆ ಸಂಸ್ಥೆಯು (ಎಲ್‌ಐಸಿ) ಹೊಸ ಟರ್ಮ್ ಇನ್ಶುರೆನ್ಸ್ ಪಾಲಿಸಿ, ‘ಜೀವನ್ ಅಮರ್’ ಪರಿಚಯಿಸಿದೆ.

18 ರಿಂದ 65 ವಯಸ್ಸಿನವರು ಈ ಯೋಜನೆ ಖರೀದಿಸಬಹುದು. ಪಾಲಿಸಿ ಅವಧಿಯು 10 ವರ್ಷದಿಂದ ಗರಿಷ್ಠ 40 ವರ್ಷದವರೆಗೆ ಇರಲಿದೆ. ಕನಿಷ್ಠ ಪರಿಹಾರ ಮೊತ್ತವು ₹ 25 ಲಕ್ಷ ಇರಲಿದೆ. ಮರಣ ಪರಿಹಾರ ಪಾವತಿಯು ಒಂದೇ ಗಂಟಿನಲ್ಲಿ ಅಥವಾ ಕಂತಿನಲ್ಲಿ ಪಡೆಯುವ ಅವಕಾಶ ಇದರಲ್ಲಿ ಇದೆ. ಈ ಯೋಜನೆಯಡಿ ಅಪಘಾತ ವಿಮೆ ಪರಿಹಾರವನ್ನೂ ಹೆಚ್ಚುವರಿಯಾಗಿ ಸೇರ್ಪಡೆ ಮಾಡಬಹುದು. ತಂಬಾಕು ಸೇವನೆ ಮಾಡುವವರು ಮತ್ತು ಮಾಡದವರಿಗೆ ಪ್ರತ್ಯೇಕ ವಿಮೆ ಕಂತು ನಿಗದಿಪಡಿಸಲಾಗಿದೆ. ಮಹಿಳೆಯರಿಗೆ ಕಡಿಮೆ ಕಂತು ಪಾವತಿ ಸೌಲಭ್ಯ ಇದೆ. ಈ ಯೋಜನೆಯಲ್ಲಿನ ಹೂಡಿಕೆಗೆ ತೆರಿಗೆ ವಿನಾಯ್ತಿಯೂ ಲಭ್ಯ ಇದೆ.

ಅಧಿಕಾರ ಸ್ವೀಕಾರ

ಕರ್ನಾಟಕ ಆ್ಯಂಟಿಬಯೊಟಿಕ್ಸ್ ಆ್ಯಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ (ಕೆಎಪಿಎಲ್) ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಸುನಿಲ್ ಕುಮಾರ್ ಕೆ. ಅಧಿಕಾರ ಸ್ವೀಕರಿಸಿದ್ದಾರೆ.

1996ರಲ್ಲಿ ‘ಕೆಎಪಿಎಲ್’ ಸೇರಿದ್ದ ಇವರು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಈ ಬಡ್ತಿಗೆ ಮುನ್ನ ಇವರು ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.