ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ: ₹36 ಸಾವಿರ ಕೋಟಿ ಪ್ರೀಮಿಯಂ ಸಂಗ್ರಹ

Published 19 ಏಪ್ರಿಲ್ 2024, 16:14 IST
Last Updated 19 ಏಪ್ರಿಲ್ 2024, 16:14 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಮಾರ್ಚ್‌ ತಿಂಗಳಿನಲ್ಲಿ ₹36,300 ಕೋಟಿಯಷ್ಟು ಪ್ರೀಮಿಯಂ ಸಂಗ್ರಹಿಸಿದೆ.

ಹಿಂದಿನ ವರ್ಷದ ಮಾರ್ಚ್‌ನಲ್ಲಿ ₹28,716 ಕೋಟಿ ಪ್ರೀಮಿಯಂ ಸಂಗ್ರಹಿಸಿತ್ತು. ಇದಕ್ಕೆ ಹೋಲಿಸಿದರೆ ಪ್ರೀಮಿಯಂ ಸಂಗ್ರಹದಲ್ಲಿ ಶೇ 26.41ರಷ್ಟು ಏರಿಕೆಯಾಗಿದೆ. 

ಎಸ್‌ಬಿಐ ಲೈಫ್‌ ಇನ್ಶೂರೆನ್ಸ್‌ ಕಂಪನಿಯು ಶೇ 24.76ರಷ್ಟು ಹಾಗೂ ಐಸಿಐಸಿಐ ಫ್ರುಡೆನ್ಶಿಯಲ್ ಲೈಫ್‌ ಇನ್ಶೂರೆನ್ಸ್‌ ಕಂಪನಿಯ ಪ್ರೀಮಿಯಂ ಸಂಗ್ರಹವು ಶೇ 12.58ರಷ್ಟು ಏರಿಕೆಯಾಗಿದೆ. 

ಆದರೆ, ಎಚ್‌ಡಿಎಫ್‌ಸಿ ಲೈಫ್‌ ಇನ್ಶೂರೆನ್ಸ್‌ ಕಂಪನಿಯ ಪ್ರೀಮಿಯಂ ಸಂಗ್ರಹವು ಶೇ 20.05ರಷ್ಟು ಇಳಿಕೆಯಾಗಿದೆ. ಮಾರ್ಚ್‌ ತಿಂಗಳಿನಲ್ಲಿ ಸಂಗ್ರಹವಾಗಿರುವ ಪ್ರೀಮಿಯಂನಲ್ಲಿ ಎಲ್‌ಐಸಿ ಪಾಲು ಶೇ 58.87ರಷ್ಟಿದೆ ಎಂದು ಜೀವ ವಿಮಾ ಪರಿಷತ್‌ನ ಅಂಕಿ–ಅಂಶಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT