ಶನಿವಾರ, ಡಿಸೆಂಬರ್ 14, 2019
21 °C

ಮಹೀಂದ್ರಾ: ಹೊಸ ಎಸ್‌ಯುವಿ ಮಾರುಕಟ್ಟೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ತನ್ನ ಹೊಸ ಸ್ಪೋರ್ಟ್ಸ್‌ ಯುಟಿಲಿವಿ ವೆಹಿಕಲ್ಸ್‌ (ಎಸ್‌ಯುವಿ) ‘ಎಕ್ಸ್‌ಯುವಿ300’ ಅನ್ನು ಗುರುವಾರ ಇಲ್ಲಿ ದೇಶಿ ಮಾರುಕಟ್ಟೆಗೆ ಪರಿಚಯಿಸಿತು.

ಇದು ಸಂಸ್ಥೆಯ ಪ್ರೀಮಿಯಂ ಮಾದರಿಯ ‘ಎಕ್ಸ್‌ಯುವಿ500’ನ ಅಗ್ಗದ ಮಾದರಿಯಾಗಿದೆ. ಇದು ಪೆಟ್ರೋಲ್‌ ಮತ್ತು ಡೀಸೆಲ್ ಮಾದರಿಯಲ್ಲಿ ಲಭ್ಯ ಇರಲಿದೆ. ಇದರ ಬೆಲೆ ಕ್ರಮವಾಗಿ ₹ 7.90 ಲಕ್ಷ ಮತ್ತು ₹ 8.49 ಲಕ್ಷ ಇರಲಿದೆ.

ಪೆಟ್ರೋಲ್‌ ಚಾಲಿತ ಮಾದರಿಯ ಎಂಜಿನ್‌ ಸಾಮರ್ಥ್ಯ 1.2 ಲೀಟರ್‌ ಮತ್ತು ಡೀಸೆಲ್‌ ಚಾಲಿತ ಮಾದರಿಯ ಎಂಜಿನ್‌ ಸಾಮರ್ಥ್ಯ 1.5 ಲೀಟರ್‌ ಇರಲಿದೆ.

‘2011ರಲ್ಲಿ ಪರಿಚಯಿಸಿದ ‘ಎಕ್ಸ್‌ಯುವಿ500’ಗೆ ಹೋಲಿಸಿದರೆ ಈ ಹೊಸ ‘ಎಸ್‌ಯುವಿ’ನ ಮಾರಾಟ ಹೆಚ್ಚಳಗೊಳ್ಳಲಿದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ.

ಇದು ಕೊರಿಯಾದ ತಂತ್ರಜ್ಞಾನ ಮತ್ತು ಭಾರತದ ಹೊಸ ಪರಿಕಲ್ಪನೆಗಳನ್ನು ಒಳಗೊಂಡ ಜಾಗತಿಕ ವಾಹನವಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಆನಂದ ಮಹೀಂದ್ರಾ ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು