ಮಂಗಳವಾರ, ಸೆಪ್ಟೆಂಬರ್ 17, 2019
27 °C

ಮಲಬಾರ್‌ ಗೋಲ್ಡ್‌: 21 ಹೊಸ ಮಳಿಗೆ

Published:
Updated:

ಬೆಂಗಳೂರು: ಚಿನ್ನಾಭರಣ ಮಾರಾಟ ಸಂಸ್ಥೆ ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌, ಮುಂದಿನ 6 ತಿಂಗಳಲ್ಲಿ 21 ಹೊಸ ಮಾರಾಟ ಮಳಿಗೆಗಳನ್ನು ಆರಂಭಿಸಲಿದೆ.

‘ಪಾರದರ್ಶಕ ವಹಿವಾಟು, ಗುಣಮಟ್ಟದ ಆಭರಣಗಳ ಜತೆಗೆ ಮೌಲ್ಯವರ್ಧಿತ ಸೇವೆಗಳು, ಪ್ರತಿಯೊಬ್ಬ ಗ್ರಾಹಕರ ಅಭಿರುಚಿಗೆ ತಕ್ಕಂತಹ ವಿನ್ಯಾಸಗಳ ಆಭರಣ ಪೂರೈಕೆ ನಮ್ಮ ಆದ್ಯತೆಗಳಾಗಿವೆ. ಈ ಕಾರಣದಿಂದಾಗಿಯೇ ವಿಶ್ವದಾದ್ಯಂತ ಗ್ರಾಹಕರು ನಮ್ಮನ್ನು ಒಪ್ಪಿಕೊಂಡಿದ್ದಾರೆ. ಆಸ್ಟ್ರೇಲಿಯಾ, ಕೆನಡಾ, ಈಜಿಪ್ಟ್‌ ಸೇರಿದಂತೆ ಏಳು ದೇಶಗಳಲ್ಲಿ ಈ ಹೊಸ ಮಳಿಗೆಗಳು ಸ್ಥಾಪನೆಗೊಳ್ಳಲಿವೆ’ ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎಂ.ಪಿ.ಅಹ್ಮದ್ ತಿಳಿಸಿದ್ದಾರೆ.

Post Comments (+)