ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್‌ನಿಂದ ದೇಶಿ, ಜಾಗತಿಕ ವಹಿವಾಟು ವಿಸ್ತರಣೆ: ಜನವರಿಯಲ್ಲಿ ಬರಲಿವೆ 22 ಮಳಿಗೆ

Last Updated 4 ಜನವರಿ 2022, 11:29 IST
ಅಕ್ಷರ ಗಾತ್ರ

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಹೊಸ ವರ್ಷದಲ್ಲಿ ದೇಶ ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ವಹಿವಾಟು ವಿಸ್ತರಣೆಯನ್ನು ಘೋಷಿಸಿದೆ. ‘ಜನವರಿ ತಿಂಗಳಿನಲ್ಲಿಯೇ ವಿಶ್ವದ ಹಲವೆಡೆ ಒಟ್ಟು 22 ಹೊಸ ಮಳಿಗೆಗಳನ್ನು ತೆರೆಯಲಿದ್ದು, ಅದಕ್ಕಾಗಿ ₹ 800 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮದ್ ಮಂಗಳವಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂಪನಿಯು ತೆರೆಯಲಿರುವ ಒಟ್ಟಾರೆ ಮಳಿಗೆಗಳ ಪೈಕಿ 10 ಮಳಿಗೆಗಳು ಭಾರತದಲ್ಲಿ ಇರಲಿವೆ. ಉಳಿದ 12 ಮಳಿಗೆಗಳು ಪಶ್ಚಿಮ ಏಷ್ಯಾ ಮತ್ತು ಆಗ್ನೇಯ ಏಷ್ಯಾದಲ್ಲಿ ಇರಲಿವೆ’ ಎಂದರು. ಆಭರಣ ಮಾರಾಟ ಕಂಪನಿಯೊಂದು ಒಂದೇ ತಿಂಗಳಲ್ಲಿ ಇಷ್ಟೊಂದು ಸಂಖ್ಯೆಯ ಮಳಿಗೆಗಳನ್ನು ತೆರೆಯುತ್ತಿರುವುದು ಭಾರತದಲ್ಲಿ ಇದೇ ಮೊದಲು ಎಂದು ‘ಮಲಬಾರ್’ ಕಂಪನಿ ಹೇಳಿದೆ.

‘ಮಳಿಗೆಗಳ ಒಟ್ಟಾರೆ ಸಂಖ್ಯೆಯನ್ನು 750ಕ್ಕೆ ಹೆಚ್ಚಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಚಿನ್ನಾಭರಣಗಳ ರಿಟೇಲ್‌ ಮಾರಾಟಗಾರರ ಸಾಲಿನಲ್ಲಿ ಮೊದಲ ಸ್ಥಾನ ಪಡೆಯುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ಹೊಸ ಮಳಿಗೆಗಳಿಂದಾಗಿ ಚಿನ್ನಾಭರಣ ವ್ಯಾಪಾರದ ರಿಟೇಲ್‌, ತಯಾರಿಕೆ, ತಾಂತ್ರಿಕ ಮತ್ತು ಆಡಳಿತ ವಿಭಾಗಗಳಲ್ಲಿ ಐದು ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ’ ಎಂದು ಅವರು ಮಾಹಿತಿ ನೀಡಿದರು.

ಮೊದಲ ಮಳಿಗೆಯು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಕಾರ್ಯಾರಂಭ ಮಾಡಲಿದೆ. ಆ ಬಳಿಕ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಉತ್ತರ ಪ್ರದೇಶ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ, ದುಬೈ, ಮಲೇಷ್ಯಾ, ಮಸ್ಕತ್‌ನಲ್ಲಿ ಕಾರ್ಯಾರಂಭ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT