ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪಾಲ್ ಹಾಸ್ಪಿಟಲ್ಸ್ – ಕನೆಕ್ಟೆಡ್‌ಲೈಫ್ ನಡುವೆ ಒಪ್ಪಂದ

Last Updated 17 ಮಾರ್ಚ್ 2022, 22:25 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಎರಡನೆಯ ಅತಿದೊಡ್ಡ ಆರೋಗ್ಯಸೇವಾ ಸಂಸ್ಥೆಯಾಗಿರುವ ಮಣಿಪಾಲ್ ಹಾಸ್ಪಿಟಲ್ಸ್‌, ಕನೆಕ್ಟೆಡ್ ಲೈಫ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಶಸ್ತ್ರಚಿಕಿತ್ಸೆಯ ನಂತರದ ಆರೈಕೆ ಅಗತ್ಯವಿರುವವರು ಫಿಟ್‌ಬಿಟ್‌ ಕಂಪನಿಯ ಸ್ಮಾರ್ಟ್ ಉಪಕರಣಗಳನ್ನು ಬಳಸಿ ಮನೆಯಿಂದಲೇ ಸಲಹೆ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಿದೆ.

ಶಸ್ತ್ರಚಿಕಿತ್ಸೆ ನಂತರದಲ್ಲಿ ರೋಗಿಗಳ ಆರೋಗ್ಯ ಹೇಗೆ ಸುಧಾರಿಸುತ್ತಿದೆ ಎಂಬುದನ್ನು ವರ್ಚುವಲ್ ವೇದಿಕೆಯನ್ನು ಬಳಸಿ ನಿಗಾ ಇರಿಸಲು ಆಸ್ಪತ್ರೆ ಸಿಬ್ಬಂದಿಗೆ ಸಾಧ್ಯವಾಗುತ್ತದೆ. ರೋಗಿಗೆ ಅಗತ್ಯ ಸಲಹೆಗಳನ್ನು ನೀಡಲು ಕೂಡ ಆಗುತ್ತದೆ. ಆ್ಯಂಜಿಯೊಪ್ಲಾಸ್ಟಿ, ಹೃದಯದ ಬೈಪಾಸ್ ಸರ್ಜರಿ ಮತ್ತು ಇತರ ಕೆಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ರೋಗಿಗಳ ಜೊತೆ ಸಂ‍ಪರ್ಕದಲ್ಲಿ ಇರಲು ಇದು ನೆರವಾಗುತ್ತದೆ ಎಂದು ಮಣಿಪಾಲ್ ಹಾಸ್ಪಿಟಲ್ಸ್ ಹೇಳಿದೆ.

ರೋಗಿಯ ಹೃದಯ ಬಡಿತ, ಆಮ್ಲಜನಕದ ಮಟ್ಟ ಸೇರಿದಂತೆ ಕೆಲವು ಅಗತ್ಯ ವಿವರಗಳನ್ನು ಈ ವ್ಯವಸ್ಥೆಯ ಮೂಲಕ ಸಂಗ್ರಹಿಸಲು ಆಗುತ್ತದೆ. ‘ಮಣಿಪಾಲ್ ಹಾಸ್ಪಿಟಲ್ಸ್‌ ಮತ್ತು ದೇಶದ ಆರೋಗ್ಯಸೇವಾ ವ್ಯವಸ್ಥೆಯಲ್ಲಿ ಇದು ಹೊಸ ಅಧ್ಯಾಯದ ಆರಂಭ’ ಎಂದು ಮಣಿಪಾಲ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT