ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪಾಲ್ ತೆಕ್ಕೆಗೆ ಕೊಲಂಬಿಯಾ ಏಷ್ಯಾ

Last Updated 2 ನವೆಂಬರ್ 2020, 19:35 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ಸೇವಾ ಕ್ಷೇತ್ರದ ‘ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್’ನ ಭಾರತದ ವಹಿವಾಟುಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಒಪ್ಪಂದ ಮಾಡಿಕೊಂಡಿರುವುದಾಗಿ ಮಣಿಪಾಲ್ ಹಾಸ್ಪಿಟಲ್ಸ್ ಸಮೂಹ ಸೋಮವಾರ ಹೇಳಿದೆ.

ಮಣಿಪಾಲ್ ಹಾಸ್ಪಿಟಲ್ಸ್ ಸಮೂಹವು ಒಟ್ಟು ₹ 2,100 ಕೋಟಿ ಪಾವತಿಸಿ,ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಪ್ರೈವೇಟ್‌ ಲಿಮಿಟೆಡ್‌ ಅನ್ನು ಖರೀದಿಸ
ಲಿದೆ ಎಂದು ಮೂಲಗಳು ತಿಳಿಸಿವೆ.

ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್‌ನ ಶೇಕಡ 100ರಷ್ಟು ಪಾಲನ್ನು ಖರೀದಿಸುವ ಉದ್ದೇಶ ಮಣಿಪಾಲ್ ಹಾಸ್ಪಿಟಲ್ಸ್ ಕಂಪನಿಯದ್ದು. ಕಾನೂನು ಅನುಮತಿ ದೊರೆತ ನಂತರ ಮಾಲೀಕತ್ವದ ಬದಲಾವಣೆಯು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮಣಿಪಾಲ್ ಹಾಸ್ಪಿಟಲ್ಸ್ ಪ್ರಕಟಣೆ ತಿಳಿಸಿದೆ.

ಆರೋಗ್ಯ ಸೇವಾ ವಲಯದ ಈ ಎರಡೂ ಕಂಪನಿಗಳಿಂದ ದೇಶದ 15 ನಗರಗಳಲ್ಲಿ ಒಟ್ಟು 27 ಆಸ್ಪತ್ರೆಗಳು ಇವೆ. ಇಷ್ಟು ಆಸ್ಪತ್ರೆಗಳಲ್ಲಿ ಒಟ್ಟು 7,300ಕ್ಕಿಂತ ಹೆಚ್ಚಿನ ಹಾಸಿಗೆ ಸೌಲಭ್ಯ, ನಾಲ್ಕು ಸಾವಿರಕ್ಕಿಂತ ಹೆಚ್ಚಿನ ವೈದ್ಯರು ಹಾಗೂ 10 ಸಾವಿರಕ್ಕಿಂತ ಹೆಚ್ಚಿನ ನೌಕರರು ಇರಲಿದ್ದಾರೆ.

‘ಇದು ಅಸಾಮಾನ್ಯ ಪಯಣವೊಂದರ ಆರಂಭ. ಕೊಲಂಬಿಯಾ ಏಷ್ಯಾ ಜೊತೆ ಸೇರಿದಾಗ ನಮಗೆ, ಹೆಚ್ಚುತ್ತಿರುವ ನಿರೀಕ್ಷೆಗಳಿಗೆ ತಕ್ಕಂತೆ ಸೇವೆ ಒದಗಿಸಲು ಸಾಧ್ಯವಾಗುತ್ತದೆ’ ಎಂದು ಮಣಿಪಾಲ್ ಶೈಕ್ಷಣಿಕ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ರಂಜನ್ ಪೈ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT