ಶುಕ್ರವಾರ, ಜೂನ್ 5, 2020
27 °C
ಏಪ್ರಿಲ್‌ ವಹಿವಾಟಿನ ಮೇಲೆ ಆರ್ಥಿಕ ಉತ್ತೇಜನಾ ಕ್ರಮಗಳ ಪ್ರಭಾವ

ಷೇರುಪೇಟೆ | ₹19.13 ಲಕ್ಷ ಕೋಟಿ ಗಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಷೇರುಪೇಟೆಗಳ ವಹಿವಾಟು ಮಾರ್ಚ್‌ ತಿಂಗಳಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಸೂಚ್ಯಂಕದ ಏರಿಕೆ ಮತ್ತು ಹೂಡಿಕೆದಾರರ ಸಂಪತ್ತು ವೃದ್ಧಿಯ ದೃಷ್ಟಿಯಿಂದ ತುಸು ಉತ್ತಮವಾಗಿದೆ.

ಒಂದು ತಿಂಗಳಿನಲ್ಲಿ ಮಾರುಕಟ್ಟೆ ಮೌಲ್ಯ ₹ 110.28 ಲಕ್ಷ ಕೋಟಿಗಳಿಂದ ₹ 129.41 ಲಕ್ಷ ಕೋಟಿಗಳಿಗೆ ಅಂದರೆ ₹ 19.13 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ. ಮಾರ್ಚ್‌ನಲ್ಲಿ ₹32.32 ಲಕ್ಷ ಕೋಟಿಗಳಷ್ಟು ಸಂಪತ್ತು ಕರಗಿತ್ತು.

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವು ಮಾರ್ಚ್‌ ಅಂತ್ಯಕ್ಕೆ 28 ಸಾವಿರದ ಸಮೀಪದಲ್ಲಿ ಇದ್ದಿದ್ದು ಏಪ್ರಿಲ್‌ ಅಂತ್ಯಕ್ಕೆ 34 ಸಾವಿರದ ಸಮೀಪಕ್ಕೆ ಬಂದಿದೆ. 

ಲಾಕ್‌ಡೌನ್‌ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಷೇರುಪೇಟೆಯ ವಹಿವಾಟು ಏರಿಳಿತ ಕಾಣುತ್ತಿದೆಯಾದರೂ ತಿಂಗಳ ಒಟ್ಟಾರೆ ವಹಿವಾಟು ಹಲವು ಅಂಶಗಳಿಂದಾಗಿ ಸಕಾರಾತ್ಮಕವಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ಉತ್ತೇಜನಾ ಕ್ರಮಗಳು, ಇಎಂಐ ಮುಂದೂಡಿಕೆ, ನಗದು ಲಭ್ಯತೆಗೆ ಕ್ರಮ, ಮ್ಯೂಚುವಲ್‌ ಫಂಡ್‌ ಉದ್ದಿಮೆಯ ಸಂಕಷ್ಟಕ್ಕೆ ಆರ್‌ಬಿಐ ನೆರವು ನೀಡಿರುವುದು, ಎರಡನೇ ಹಂತದ ಆರ್ಥಿಕ ಉತ್ತೇಜನಾ ಕೊಡುಗೆ ಘೋಷಣೆಯಂತಹ ಸಕಾರಾತ್ಮಕ ಅಂಶಗಳು ಸೂಚ್ಯಂಕಗಳ ಏರಿಕೆಗೆ ಉತ್ತೇಜನ ನೀಡಿವೆ.

ವಾರದ ವಹಿವಾಟು: ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯ ಗೊಂಡಿದೆ. ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ, ಹೂಡಿಕೆದಾರರ ಸಂಪತ್ತು ₹7.68 ಲಕ್ಷ ಕೋಟಿ ವೃದ್ಧಿಯಾಗಿದ್ದು, ₹129.41 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಬಿಎಸ್‌ಇ ಸಂವೇದಿ ಸೂಚ್ಯಂಕ 2,390 ಅಂಶ ಏರಿಕೆ ಕಂಡು 33,1717 ಅಂಶಗಳಿಗೆ ಏರಿಕೆಯಾಗಿದೆ. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್ಇ) ಸೂಚ್ಯಂಕ ನಿಫ್ಟಿ 705 ಅಂಶ ಹೆಚ್ಚಾಗಿ 9,860ಕ್ಕೆ ತಲುಪಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು