ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೂಳಿ ಓಟಕ್ಕೆ ತಡೆ: ಸೆನ್ಸೆಕ್ಸ್‌ 269, ನಿಫ್ಟಿ 65 ಅಂಶ ಇಳಿಕೆ

Published 21 ಜೂನ್ 2024, 14:23 IST
Last Updated 21 ಜೂನ್ 2024, 14:23 IST
ಅಕ್ಷರ ಗಾತ್ರ

ಮುಂಬೈ: ಸತತ ಆರು ವಹಿವಾಟಿನಲ್ಲಿ ಏರಿಕೆ ಕಂಡಿದ್ದ ಷೇರು ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಇಳಿಕೆ ಕಂಡಿವೆ. 

ತೈಲ ಮತ್ತು ಅನಿಲ, ಬಂಡವಾಳ ಸರಕು ಹಾಗೂ ಎಫ್‌ಎಂಸಿಜಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಗೂಳಿಯ ಓಟಕ್ಕೆ ತಡೆ ಬಿದ್ದಿದ್ದು, ಕರಡಿ ಕುಣಿತ ಜೋರಾಯಿತು.  

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 269 ಅಂಶ ಇಳಿಕೆಯಾಗಿ, 77,209ಕ್ಕೆ ಅಂತ್ಯಗೊಂಡಿತು. ದಿನದ ವಹಿವಾಟಿನ ವೇಳೆ 676 ಅಂಶ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 65 ಅಂಶ ಕಡಿಮೆಯಾಗಿ 23,501ಕ್ಕೆ ಸ್ಥಿರಗೊಂಡಿತು. ವಹಿವಾಟಿನ ವೇಳೆ ಸೂಚ್ಯಂಕವು 100 ಅಂಶ ಏರಿಕೆಯಾಗಿತ್ತು.

ಸೆನ್ಸೆಕ್ಸ್‌ ಗುಚ್ಛದಲ್ಲಿನ ಅಲ್ಟ್ರಾಟೆಕ್‌ ಸಿಮೆಂಟ್‌, ಲಾರ್ಸೆನ್‌ ಆ್ಯಂಡ್‌ ಟೊಬ್ರೊ, ಟಾಟಾ ಮೋಟರ್ಸ್‌, ನೆಸ್ಲೆ ಇಂಡಿಯಾ, ಟಾಟಾ ಸ್ಟೀಲ್‌, ಹಿಂದುಸ್ತಾನ್‌ ಯೂನಿಲಿವರ್, ಬಜಾಜ್‌ ಫೈನಾನ್ಸ್‌, ರಿಲಯನ್ಸ್‌ ಇಂಡಸ್ಟ್ರೀಸ್, ಮಹೀಂದ್ರ ಆ್ಯಂಡ್‌ ಮಹೀಂದ್ರ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಭಾರ್ತಿ ಏರ್‌ಟೆಲ್‌, ಇನ್ಫೊಸಿಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ವಿಪ್ರೊ ಮತ್ತು ಎನ್‌ಟಿಪಿಸಿ ಷೇರುಗಳು ಗಳಿಕೆ ಕಂಡಿವೆ.

ಸೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆಗಳು ಇಳಿಕೆ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT