ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ ಕಾರು ಮಾರಾಟ ಇಲ್ಲ: ಮಾರುತಿ

Last Updated 25 ಏಪ್ರಿಲ್ 2019, 18:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಇಂಡಿಯಾ ಕಂಪನಿಯು 2020ರ ಏಪ್ರಿಲ್‌ 1 ರಿಂದ ಡೀಸೆಲ್‌ ಕಾರು ತಯಾರಿಕೆ ಮತ್ತು ಮಾರಾಟ ನಿಲ್ಲಿಸಲು ನಿರ್ಧರಿಸಿದೆ.

‘ಗ್ರಾಹಕರ ಪ್ರತಿಕ್ರಿಯೆಯನ್ನು ಅವಲಂಬಿಸಿ, ಒಂದೊಮ್ಮೆ ಡೀಸೆಲ್‌ ಕಾರುಗಳಿಗೆ ಬೇಡಿಕೆ ಇದೆ ಎಂದಾದರೆ ಡೀಸೆಲ್‌ ಕಾರುಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಕಂಪನಿ ಅಧ್ಯಕ್ಷ ಆರ್‌.ಸಿ. ಭಾರ್ಗವ್‌ ತಿಳಿಸಿದ್ದಾರೆ.

ಕಂಪನಿ, ದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ವಾಹನಗಳಲ್ಲಿ ಶೇ 23ರಷ್ಟು ಡೀಸೆಲ್‌ ಕಾರುಗಳಾಗಿವೆ. ಹಿಂದಿನ ಹಣಕಾಸು ವರ್ಷದಲ್ಲಿ 4.63 ಲಕ್ಷ ಡೀಸೆಲ್‌ ಕಾರುಗಳನ್ನು ಮಾರಾಟ ಮಾಡಿತ್ತು.

ಮುಂದಿನ ವರ್ಷದಿಂದ ವಾಹನ ಮಾಲಿನ್ಯ ನಿಯಂತ್ರಣ ಮಾನದಂಡವಾದ ‘ಭಾರತ್‌ ಸ್ಟೇಜ್‌–6’ (ಬಿಎಸ್‌–6) ಜಾರಿಗೆ ಬರಲಿದೆ. ಅದಕ್ಕೆ ಅನುಗುಣವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT