ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಪೂರಿತ ‘ಎಂಜಿಯು’ ಬದಲಿಸಲು ಮಾರುತಿ ನಿರ್ಧಾರ

Last Updated 6 ಡಿಸೆಂಬರ್ 2019, 13:33 IST
ಅಕ್ಷರ ಗಾತ್ರ

ನವದೆಹಲಿ: ತನ್ನ ಪೆಟ್ರೋಲ್‌ ಸ್ಮಾರ್ಟ್‌ ಹೈಬ್ರಿಡ್‌ (ಎಸ್‌ಎಚ್‌ವಿಎಸ್‌) ಮಾದರಿಯ ಸಿಯಾಜ್‌, ಎರ್ಟಿಗಾ ಮತ್ತು ಎಕ್ಸ್‌ಎಲ್‌6 ವಾಹನಗಳಲ್ಲಿನ ದೋಷಪೂರಿತ ಮೋಟರ್‌ ಜನರೇಟರ್‌ ಯುನಿಟ್‌ (ಎಂಜಿಯು) ಬದಲಿಸಲು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಮುಂದಾಗಿದೆ.

ಈ ಉದ್ದೇಶಕ್ಕೆ ಒಟ್ಟಾರೆ 63,493 ವಾಹನಗಳನ್ನು ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ವಿದೇಶಿ ಸಂಸ್ಥೆಯ ಬಿಡಿಭಾಗ ತಯಾರಿಕಾ ಘಟಕದಲ್ಲಿಯೇ ದೋಷ ಸಂಭವಿಸಿರುವ ಸಾಧ್ಯತೆ ಇದೆ. 2019ರ ಜನವರಿ 1ರಿಂದ ನವೆಂಬರ್‌ 21ರವರೆಗೆ ತಯಾರಿಸಿದ ವಾಹನಗಳಲ್ಲಿ ಈ ದೋಷ ಕಂಡು ಬಂದಿದೆ. ದೋಷ ತಪಾಸಿಸಲು ವಾಹನ ಮರಳಿ ಪಡೆಯಲಾಗುವುದು. ದೋಷಪೂರಿತ ಭಾಗವನ್ನು ಉಚಿತವಾಗಿ ಬದಲಿಸಿಕೊಡಲಾಗುವುದು. ಡೀಲರ್‌ಗಳು ವಾಹನ ಮಾಲೀಕರನ್ನು ಸಂಪರ್ಕಿಸಲಿದ್ದಾರೆ ಎಂದು ‘ಎಂಎಸ್‌ಐ’ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT