ಶನಿವಾರ, ಡಿಸೆಂಬರ್ 14, 2019
20 °C

ಜನವರಿಯಿಂದ ಮಾರುತಿ ಸುಜುಕಿಕಾರ್‌ ಬೆಲೆ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾರ್‌ ತಯಾರಿಸುವ ದೇಶದ ಅತಿದೊಡ್ಡ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ), ಜನವರಿಯಿಂದ ತನ್ನ ಕಾರ್‌ಗಳ ಮಾರಾಟ ಬೆಲೆ ಹೆಚ್ಚಿಸುವುದಾಗಿ ಪ್ರಕಟಿಸಿದೆ.

ತಯಾರಿಕಾ ವೆಚ್ಚದಲ್ಲಿನ ಹೆಚ್ಚಳದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ. ಬೇರೆ, ಬೇರೆ ಮಾದರಿಯ ಕಾರ್‌ಗಳಿಗೆ ಬೆಲೆ ಏರಿಕೆಯು ವಿಭಿನ್ನವಾಗಿರುತ್ತದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಸದ್ಯಕ್ಕೆ ಕಂಪನಿಯು ಸಣ್ಣ ಕಾರ್ ಆಲ್ಟೊದಿಂದ ಹಿಡಿದು, ಬಹು ಉದ್ದೇಶದ ವಾಹನ (ಎಂಪಿವಿ) ‘ಎಕ್ಸ್‌ಎಲ್‌ಆರ್‌’ವರೆಗೆ ವಿವಿಧ ಶ್ರೇಣಿಯ ಕಾರ್‌ಗಳನ್ನು ₹ 2.89 ಲಕ್ಷದಿಂದ ₹ 11.47 ಲಕ್ಷದವರೆಗೆ (ದೆಹಲಿ ಎಕ್ಸ್‌ಷೋರೂಂ ಬೆಲೆ) ಮಾರಾಟ ಮಾಡುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು