ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಟ್ರಿಮೋನಿಗೆ ನಕಲಿ ಖಾತೆದಾರರ ಕಾಟ

Published 9 ಜನವರಿ 2024, 15:23 IST
Last Updated 9 ಜನವರಿ 2024, 15:23 IST
ಅಕ್ಷರ ಗಾತ್ರ

ಚೆನ್ನೈ: ವಧು–ವರ ಆಯ್ಕೆಯ ಆನ್‌ಲೈನ್‌ ತಾಣವಾಗಿರುವ ‘ಮ್ಯಾಟ್ರಿಮೋನಿಡಾಟ್‌ಕಾಂ’ನಲ್ಲಿ ನಕಲಿ ಖಾತೆದಾರರ ಹಾವಳಿ ಹೆಚ್ಚಿದೆ. ಇದರಿಂದ  ನೈಜ ಚಂದಾದಾರರು ಆನ್‌ಲೈನ್‌ ವಂಚಕರ ಜಾಲಕ್ಕೆ ಸಿಲುಕದಂತೆ ತಡೆಯಲು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾಟ್ರಿಮೋನಿ ಕಂಪನಿ ತಿಳಿಸಿದೆ.

ಹಣ ಪಾವತಿಸುವಂತೆ ಬೇಡಿಕೆ, ಉತ್ಪನ್ನವು ಕೈಗೆ ಸಿಕ್ಕಿದ ನಂತರ ಹಣ ಪಾವತಿಸುವ ಆಯ್ಕೆಯ (ಕ್ಯಾಶ್ ಆನ್‌ ಡೆಲಿವರಿ) ವಿಧಾನದ ಮೂಲಕ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿವೆ. ಕೆಲವು ನಕಲಿ ಖಾತೆದಾರರು ವಂಚನೆಯಲ್ಲಿ ತೊಡಗಿದ್ದಾರೆ. ಈ ಕೃತ್ಯದ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದು ಕಂಪನಿಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುರುಗವೇಲ್ ಜಾನಕಿರಾಮನ್ ತಿಳಿಸಿದ್ದಾರೆ.

ವಂಚನೆಯ ಜಾಲಕ್ಕೆ ಬೀಳದಂತೆ ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಅವರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ವಿಡಿಯೊ ಚಿತ್ರೀಕರಿಸಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT