ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಉಪಕರಣಗಳ ಉದ್ದಿಮೆಗೆ ಶೇ 85ರವರೆಗೆ ವರಮಾನ ನಷ್ಟ

Last Updated 5 ಆಗಸ್ಟ್ 2020, 14:25 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಕಾಯಿಲೆಯಿಂದಾಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳು ನಡೆಯುವುದು ಕಡಿಮೆಯಾಗಿದೆ. ಇದರಿಂದಾಗಿ ಏಪ್ರಿಲ್‌–ಜೂನ್‌ ಅವಧಿಯಲ್ಲಿ ವೈದ್ಯಕೀಯ ತಂತ್ರಜ್ಞಾನ ಉದ್ದಿಮೆಗಳ ವರಮಾನ ಶೇಕಡ 50–85ರವರೆಗೆ ಕುಸಿತ ಕಂಡಿದೆ ಎಂದು ವೈದ್ಯಕೀಯ ತಂತ್ರಜ್ಞಾನ ಒಕ್ಕೂಟ ತಿಳಿಸಿದೆ.

ಈ ಉದ್ದಿಮೆಯ ಚೇತರಿಕೆಗೆ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆಯ ಹೊರೆ ತಗ್ಗಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

ಅಂಕಿ–ಅಂಶ

ವರಮಾನ ಇಳಿಕೆ (ಏಪ್ರಿಲ್‌–ಜೂನ್‌)

60%ರವರೆಗೆ - ಹೃ‌ದ್ರೋಗ ವಿಭಾಗ

85% -ಆರ್ಥೊಪೆಡಿಕ್

75%ರವರೆಗೆ -ಕಣ್ಣಿನ ಶಸ್ತ್ರಚಿಕಿತ್ಸೆ

50% -ಗಂಭೀರ ಸ್ವರೂಪದ ರೋಗಗಳ ಚಿಕಿತ್ಸಾ ಉಪಕರಣಗಳ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT