ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಗಳಲ್ಲಿ ಮ್ಯೂಚುವಲ್‌ ಫಂಡ್‌ ಹೂಡಿಕೆ ಹೆಚ್ಚಳ

Last Updated 5 ಜುಲೈ 2020, 14:06 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ಷೇರುಪೇಟೆಯಲ್ಲಿ ಮಾಡುತ್ತಿರುವ ಹೂಡಿಕೆಯಲ್ಲಿ ಏರಿಕೆ ಕಂಡುಬಂದಿದೆ.

2020ರ ಮೊದಲ ಆರು ತಿಂಗಳಿನಲ್ಲಿ (ಜನವರಿ–ಜೂನ್‌) ಷೇರುಪೇಟೆಯಲ್ಲಿ ₹ 39,500 ಕೋಟಿ ಹೂಡಿಕೆ ಮಾಡಿವೆ.ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆಗ ₹ 8,735 ಕೋಟಿ ಹೂಡಿಕೆಯಾಗಿತ್ತು.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿ (ಸೆಬಿ) ಈ ಮಾಹಿತಿ ಇದೆ.

ಒಟ್ಟಾರೆ ಹೂಡಿಕೆಯಲ್ಲಿ ಮಾರ್ಚ್‌ನಲ್ಲಿಯೇ ₹ 30 ಸಾವಿರ ಕೋಟಿ ಹೂಡಿಕೆಯಾಗಿದೆ. ಈ ತಿಂಗಳಿನಲ್ಲಿ ಷೇರುಪೇಟೆಯು ಅತಿಯಾದ ಮಾರಾಟ ಒತ್ತಡದಲ್ಲಿತ್ತು.

ವ್ಯವಸ್ಥಿತ ಹೂಡಿಕೆ ಯೋಜನೆಯ (ಎಸ್‌ಐಪಿ) ಮೂಲಕ ಷೇರುಗಳ ಮೇಲಿನ ಹೂಡಿಕೆಯು ಉತ್ತಮ ಗಳಿಕೆ ಕಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಚಂಚಲ ವಹಿವಾಟು ಮತ್ತು ಹೊಂದಾಣಿಕೆಯ ಅವಧಿಯು ಹೂಡಿಕೆದಾರರಿಗೆ ಉತ್ತಮ ಗಳಿಕೆಯ ಅವಕಾಶ ತಂದುಕೊಟ್ಟಿದೆ’ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಸಂಶೋಧನಾ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

‘ಸವಾಲುಗಳ ಹೊರತಾಗಿಯೂ, ಈ ವರ್ಷ ಷೇರು ಆಧಾರಿತ ಮ್ಯೂಚುವಲ್‌ ಪಂಡ್‌ಗಳಲ್ಲಿ ಹೂಡಿಕೆಯು ಉತ್ತಮವಾಗಿದೆ. ಸದ್ಯದ ಪರಿಸ್ಥಿತಿಯನ್ನು ಒಂದು ಅಪಾಯ ಎಂದು ಭಾವಿಸುವುದಕ್ಕಿಂತಲೂ ಅವಕಾಶವಾಗಿ ಬಳಸಿಕೊಳ್ಳುವ ಮೂಲಕ ಹೂಡಿಕೆದಾರರು ವಿವೇಚನೆಯಿಂದ ವರ್ತಿಸುತ್ತಿದ್ದಾರೆ’ ಎಂದೂ ವಿಶ್ಲೇಷಣೆ ಮಾಡಿದ್ದಾರೆ.

ಹೂಡಿಕೆ ವಿವರ (ಕೋಟಿಗಳಲ್ಲಿ)

ಜನವರಿ;₹ 1,384

ಫೆಬ್ರುವರಿ;₹ 9,863

ಮಾರ್ಚ್‌₹ 30,285

ಏಪ್ರಿಲ್‌;₹ 7,965

ಮೇ;₹ 6,522

ಜೂನ್‌;₹ 612

ಅಂಕಿ–ಅಂಶ

40%

ಮಾರ್ಚ್‌ನಲ್ಲಿ ಸೂಚ್ಯಂಕದ ಕುಸಿತ

₹62 ಸಾವಿರ ಕೋಟಿ

ವಿದೇಶಿ ಬಂಡವಾಳ ಹೊರಹರಿವು

₹ 8 ಸಾವಿರ ಕೋಟಿಗೂ ಅಧಿಕ

ತಿಂಗಳ ‘ಸಿಪ್‌’ ಹೂಡಿಕೆ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT