ಶನಿವಾರ, ಡಿಸೆಂಬರ್ 5, 2020
19 °C

ಈಕ್ವಿಟಿ ಮ್ಯೂಚುವಲ್ ಫಂಡ್‌; ₹ 14,300 ಕೋಟಿ ಹೊರಹರಿವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಿಂದ ಅಕ್ಟೋಬರ್‌ನಲ್ಲಿ ಷೇರುಪೇಟೆಯಿಂದ ₹ 14,344 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಈ ಮೂಲಕ ಸತತ ಐದನೇ ತಿಂಗಳಿನಲ್ಲಿಯೂ ಬಂಡವಾಳ ಹಿಂದಕ್ಕೆ ಪಡೆದಂತಾಗಿದೆ. ಜೂನ್‌ ಬಳಿಕ ಒಟ್ಟಾರೆಯಾಗಿ ₹ 37,498 ಕೋಟಿ ಬಂಡವಾಳ ಹಿಂದಕ್ಕೆ ಪಡೆದಂತಾಗಿದೆ.

ದೇಶಿ ಆರ್ಥಿಕತೆಯ ಮಂದಗತಿಯ ಬೆಳವಣಿಗೆ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕುರಿತಾದ ಆತಂಕದಿಂದಾಗಿ ಬಂಡವಾಳ ಹೊರಹರಿವು ಕಂಡುಬಂದಿದೆ’ ಎಂದು ಫಿನಾಲಜಿ ಕಂಪನಿಯ ಸಿಇಒ ಪ್ರಂಜಲ್‌ ಕಮ್ರಾ ಹೇಳಿದ್ದಾರೆ.

‘ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಷೇರು ಸಂಬಂಧಿತ ಮ್ಯೂಚುವಲ್‌ ಫಂಡ್‌ ಯೋಜನೆಗಳಿಂದ ₹ 7,200 ಕೋಟಿ ಹೊರಹೋಗಿದ್ದು, ವ್ಯವಸ್ಥಿತ ಹೂಡಿಕೆ ಯೋಜನೆಯ (ಎಸ್‌ಐಪಿ) ಮೂಲಕ ಒಳಹರಿವಿನಲ್ಲಿಯೂ ಕಡಿಮೆ ಆಗಿದೆ.

‘ಲಾಭ ಗಳಿಸುವ ಉದ್ದೇಶ ಹಾಗೂ ಸದ್ಯದ ಅನಿಶ್ಚಿತ ಸ್ಥಿತಿಯಿಂದಾಗಿ ಕೈಯಲ್ಲಿ ನಗದು ಒಂದಷ್ಟು ನಗದು ಇಟ್ಟುಕೊಳ್ಳುವ ಸಲುವಾಗಿಯೂ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ಅನಿಶ್ಚಿತ ಸಂದರ್ಭದಲ್ಲಿ ನಿಧಿ ನಿರ್ವಾಹಕರು ಬಂಡವಾಳ ಹಿಂತೆಗೆತ ಮಾಡುವುದು ಸಾಮಾನ್ಯವಾಗಿದೆ’ ಎಂದು ಗ್ರೋ ಸಂಸ್ಥೆಯ ಸಹ ಸ್ಥಾಪಕ ಹರ್ಷ್‌ ಜೈನ್‌ ಹೇಳಿದ್ದಾರೆ.

2020ರ ಜನವರಿ–ಮೇನಲ್ಲಿ ಮ್ಯೂಚುವಲ್‌ ಫಂಡ್‌ಗಳು ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ₹ 40 ಸಾವಿರ ಕೋಟಿಗೂ ಅಧಿಕ ಮೊತ್ತ ಹೂಡಿಕೆ ಮಾಡಿದ್ದರು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾಹಿತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು