ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಹಣಕಾಸು ಸಂಸ್ಥೆಗಳ ಸಾಲ ನೀಡಿಕೆ ಶೇ 11ರಷ್ಟು ಹೆಚ್ಚಳ

Last Updated 18 ಡಿಸೆಂಬರ್ 2022, 10:23 IST
ಅಕ್ಷರ ಗಾತ್ರ

ನವದೆಹಲಿ: ಕಿರು ಹಣಕಾಸು ಸಂಸ್ಥೆಗಳು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ₹ 71,916 ಕೋಟಿ ಮೊತ್ತದ ಸಾಲ ನೀಡಿವೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಲ ನೀಡಿಕೆಯಲ್ಲಿ ಶೇ 11ರಷ್ಟು ಹೆಚ್ಚಳ ಕಂಡುಬಂದಿದೆ.

ಹಿಂದಿನ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಿರು ಹಣಕಾಸು ಸಂಸ್ಥೆಗಳು ₹ 64,899 ಕೋಟಿ ಮೊತ್ತದ ಸಾಲ ನೀಡಿದ್ದವು ಎಂದು ಕಿರು ಹಣಕಾಸು ಸಂಸ್ಥೆಗಳ ಜಾಲದ (ಎಂಫಿನ್‌) ಈಚಿನ ವರದಿ ತಿಳಿಸಿದೆ.

2022ರ ಸೆಪ್ಟೆಂಬರ್‌ 30ರ ಅಂತ್ಯದವರೆಗೆ ಕಿರು ಹಣಕಾಸು ಉದ್ಯಮವು ನೀಡಿರುವ ಒಟ್ಟು ಸಾಲದ ಮೊತ್ತವು ₹3 ಲಕ್ಷ ಕೋಟಿಯಷ್ಟು ಆಗಿದೆ. 2021ರ ಸೆಪ್ಟೆಂಬರ್‌ 30ಕ್ಕೆ ಹೋಲಿಸಿದರೆ ಶೇ 23.5ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಕಿರು ಹಣಕಾಸು ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಖಾತೆಗಳ ಸಂಖ್ಯೆಯು 12 ತಿಂಗಳಿನಲ್ಲಿ ಶೇ 14.2ರಷ್ಟು ಹೆಚ್ಚಾಗಿದೆ. ಒಟ್ಟು ಖಾತೆಗಳ ಸಂಖ್ಯೆಯು ಸೆಪ್ಟೆಂಬರ್ 30ರ ಅಂತ್ಯಕ್ಕೆ 12 ಕೋಟಿಗೆ ತಲುಪಿದೆ.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಎರಡು ವರ್ಷಗಳಲ್ಲಿ ಸಮಸ್ಯೆ ಆಗಿದ್ದರೂ ಕಳೆದ ಐದು ವ‌ರ್ಷಗಳಲ್ಲಿ ಉದ್ಯಮದ ವಾರ್ಷಿಕ ಸರಾಸರಿಬೆಳವಣಿಗೆ ಪ್ರಮಾಣವು (ಸಿಎಜಿಆರ್‌) ಶೇ 22.2ರಷ್ಟು ಉತ್ತಮವಾಗಿದೆ ಎಂದು ಎಂಫಿನ್‌ನಿ ನಿರ್ದೇಶಕ ಅಲೋಕ್‌ ಮಿಶ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT