ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ₹ 22,540 ಕೋಟಿ ಮೊತ್ತದ ಸೆಮಿಕಂಡಕ್ಟರ್‌ ಘಟಕ ಸ್ಥಾಪನೆ: ಮೈಕ್ರಾನ್

Published 22 ಜೂನ್ 2023, 16:09 IST
Last Updated 22 ಜೂನ್ 2023, 16:09 IST
ಅಕ್ಷರ ಗಾತ್ರ

ನವದೆಹಲಿ : ಕಂಪ್ಯೂಟರ್‌ ಸ್ಟೊರೇಜ್ ಚಿಪ್‌ ತಯಾರಿಸುವ ಮೈಕ್ರಾನ್‌ ಕಂಪನಿಯು ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ ಜೋಡಣೆ ಮತ್ತು ಪರೀಕ್ಷಾ ಘಟಕ ಸ್ಥಾಪಿಸಲಿದೆ. ಇದರ ಒಟ್ಟು ಹೂಡಿಕೆಯು ₹22,540 ಕೋಟಿ ಆಗಲಿದೆ ಎಂದು ಕಂಪನಿಯು ಗುರುವಾರ ಹೇಳಿದೆ.

ಕೇಂದ್ರ ಸರ್ಕಾರದ ಅಸೆಂಬ್ಲಿ, ಟೆಸ್ಟಿಂಗ್‌, ಮಾರ್ಕಿಂಗ್‌ ಆ್ಯಂಡ್‌ ಪ್ಯಾಕೇಜಿಂಗ್‌ನ (ಎಟಿಎಂಪಿ) ಪರಿಷ್ಕೃತ ಯೋಜನೆಯ ಅಡಿ ಘಟಕ ಸ್ಥಾಪನೆಗೆ ಒಪ್ಪಿಗೆ ದೊರೆತಿದೆ.

ಮೈಕ್ರಾನ್‌ ಕಂಪನಿಯು ಎರಡು ಹಂತಗಳಲ್ಲಿ ಘಟಕ ಸ್ಥಾಪಿಸಲಿದ್ದು, ₹6,760 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಘಟಕ ನಿರ್ಮಾಣ ಯೋಜನೆಯ ಒಟ್ಟು ಮೊತ್ತದಲ್ಲಿ ‘ಎಟಿಎಂಪಿ’ ಯೋಜನೆಯ ಅಡಿಯಲ್ಲಿ ಶೇ 50ರಷ್ಟು ಹಣವನ್ನು ಕೇಂದ್ರ ಸರ್ಕಾರ ಮತ್ತು ಶೇ 20ರಷ್ಟನ್ನು ಗುಜರಾತ್ ಸರ್ಕಾರ ನೀಡಲಿದೆ.

ಉದ್ದೇಶಿತ ಘಟಕವು ಮುಂಬರುವ ವರ್ಷಗಳಲ್ಲಿ ನೇರವಾಗಿ 5 ಸಾವಿರ ಮತ್ತು ಸ್ಥಳೀಯ ಸಮುದಾಯಕ್ಕೆ 15 ಸಾವಿರ ಉದ್ಯೋಗ ಸೃಷ್ಟಿಸಲಿದೆ. ದೇಶಿ ಮತ್ತು ಜಾಗತಿಕ ಮಾರುಕಟ್ಟೆಗಳ ಬೇಡಿಕೆಯನ್ನು ಈ ಘಟಕ ಪೂರೈಸಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT