ಶನಿವಾರ, ಆಗಸ್ಟ್ 24, 2019
27 °C

ಮೈಂಡ್‌ಟ್ರೀಗೆ ಹೊಸ ಸಿಇಒ ನೇಮಕ

Published:
Updated:

ನವದೆಹಲಿ: ಬೆಂಗಳೂರಿನ ಮಧ್ಯಮಗಾತ್ರದ ಐ.ಟಿ ಸೇವಾ ಸಂಸ್ಥೆ ಮೈಂಡ್‌ಟ್ರೀಗೆ, ದೇಬಶಿಸ್‌ ಚಟರ್ಜಿ ಅವರನ್ನು ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ (ಸಿಇಒ) ನೇಮಕ ಮಾಡಲಾಗಿದೆ.

ಲಾರ್ಸನ್‌ ಆ್ಯಂಡ್‌ ಟುಬ್ರೊದ ಸಿಇಒ ಎಸ್‌. ಎನ್‌. ಸುಬ್ರಮಣಿಯನ್‌ ಅವರನ್ನು ಕಾರ್ಯನಿರ್ವಾಹಕಯೇತರ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಎರಡೂ ನೇಮಕಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ಚಟರ್ಜಿ ಅವರು ಇದಕ್ಕೂ ಮೊದಲು ಕಾಗ್ನಿಜಂಟ್‌ನಲ್ಲಿದ್ದರು. ಎಂಜಿನಿಯರಿಂಗ್‌ ದೈತ್ಯ ಸಂಸ್ಥೆ ಎಲ್‌ಆ್ಯಂಡ್‌ಟಿ, ಮೈಂಡ್‌ಟ್ರೀಯನ್ನು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಂಡಿದೆ. ಸಂಸ್ಥೆಯಲ್ಲಿನ ಎಲ್‌ಆ್ಯಂಡ್‌ಟಿಯ ಪಾಲು ಬಂಡವಾಳವು ಈಗ ಶೇ 60ಕ್ಕಿಂತ ಹೆಚ್ಚಿಗೆ ಇದೆ.

Post Comments (+)