‘ಕೆಬಿಎಲ್ ಮೊಬೈಲ್ ಪ್ಲಸ್’ ಆ್ಯಪ್

7

‘ಕೆಬಿಎಲ್ ಮೊಬೈಲ್ ಪ್ಲಸ್’ ಆ್ಯಪ್

Published:
Updated:
Prajavani

ಮಂಗಳೂರು: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಡಿಜಿಟಲ್ ತಂತ್ರಜ್ಞಾನ  ಬಳಕೆ ಮಾಡುವ ಉದ್ದೇಶದಿಂದ ಕರ್ಣಾಟಕ ಬ್ಯಾಂಕ್, ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸಲು ‘ಕೆಬಿಎಲ್‌ ಮೊಬೈಲ್‌ ಪ್ಲಸ್‌’ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಿದೆ.

ಬಯೊಮೆಟ್ರಿಕ್ ಆಧಾರಿತ ಲಾಗಿನ್ ವ್ಯವಸ್ಥೆ ಹೊಂದಿದ್ದು, ಹಣ ವರ್ಗಾವಣೆ, ಮೊಬೈಲ್‌, ಡಿಟಿಎಚ್‌ಗಳ ರೀಚಾರ್ಜ್‌, ಬಿಲ್‌ ಪಾವತಿ ಮಾಡಬಹುದಾಗಿದೆ. ಅಲ್ಲದೇ ಗ್ರಾಹಕರು ತಮ್ಮ ಡೆಬಿಟ್‌ ಕಾರ್ಡ್‌ ಅನ್ನು ಬ್ಲಾಕ್‌ ಮಾಡುವ, ತೆರವುಗೊಳಿಸುವ ಹಾಗೂ ಅಂತರರಾಷ್ಟ್ರೀಯ ಬಳಕೆಯನ್ನು ನಿರ್ವಹಣೆ ಮಾಡುವ ಅವಕಾಶವನ್ನು ಒದಗಿಸಲಾಗಿದೆ. ಜತೆಗೆ ಠೇವಣಿ ಖಾತೆ, ಆರ್‌ಡಿ ಖಾತೆಗಳನ್ನು ತೆರೆಯಬಹುದಾಗಿದೆ.

ಕೆಬಿಎಲ್‌ ಕ್ಯೂರ್‌ ಕೋಡ್‌ ಮೂಲಕ ಕರ್ಣಾಟಕ ಬ್ಯಾಂಕಿನ ಯಾವುದೇ ಶಾಖೆಗೆ ಹಣ ವರ್ಗಾವಣೆ ಮಾಡಬಹುದು. ಕೆಬಿಎಲ್‌ ಸುರಕ್ಷಾ, ಪ್ರಧಾನ ಮಂತ್ರಿ ಜನಧನ, ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಗಳಿಗೆ ಆನ್‌ಲೈನ್‌ ಮೂಲಕ ನೋಂದಣಿ ಮಾಡಬಹುದಾಗಿದೆ.

ಈ ಆ್ಯಪ್ ಅನ್ನು ಕೆಬಿಎಲ್‌ ಯುಪಿಐ, ಕೆಬಿಎಲ್‌ ಎಂ–ಪಾಸ್‌ಬುಕ್‌, ಕೆಬಿಎಲ್‌ ಲೋಕೇಟರ್ ಆ್ಯಪ್‌ಗಳ ಜತೆಗೆ ಜೋಡಣೆ ಮಾಡಲಾಗಿದೆ.

‘ಗ್ರಾಹಕರ ಎಲ್ಲ ಸೇವೆಗಳಿಗೆ ಕೆಬಿಎಲ್ ಮೊಬೈಲ್ ಪ್ಲಸ್ ಆ್ಯಪ್ ಉತ್ತಮ ವೇದಿಕೆಯಾಗಲಿದೆ. ಬ್ಯಾಂಕಿನ ಎಲ್ಲ ಸೇವೆಗಳನ್ನು ಈ ಆ್ಯಪ್‌ನಲ್ಲಿ ಜೋಡಣೆ ಮಾಡಲಾಗಿದ್ದು, ಒಂದೇ ಆ್ಯಪ್‌ ಮೂಲಕ ಎಲ್ಲ ಸೇವೆಗಳನ್ನು ಪಡೆಯಬಹುದಾಗಿದೆ. ಮುಂಬರುವ ದಿನಗಳಲ್ಲಿ ತಂತ್ರಜ್ಞಾನಕ್ಕೆ ಅನುಗುಣವಾಗಿ ಆ್ಯಪ್‌ನಲ್ಲಿ ಇನ್ನಷ್ಟು ಸುಧಾರಣೆ ಮಾಡಲಾಗುವುದು’ ಎಂದು ಬ್ಯಾಂಕಿನ ಸಿಇಒ ಮಹಾಬಲೇಶ್ವರ್‌ ಎಂ.ಎಸ್‌. ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಪಿ. ಜಯರಾಮ್‌ ಭಟ್‌, ಮಹಾಪ್ರಬಂಧಕರು, ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !