ಗುರುವಾರ , ಮೇ 26, 2022
24 °C

ಮಾರುಕಟ್ಟೆ ಸ್ಥಿರವಾದರೆ ‘ಐಪಿಒ’ಗೆ: ಮೊಬಿಕ್ವಿಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ಕಂಪನಿಗೆ ಒಂದು ಅವಿಸ್ಮರಣೀಯ ಅವಕಾಶ. ಹಾಗಾಗಿ, ಬಂಡವಾಳ ಮಾರುಕಟ್ಟೆ ಸ್ಥಿತಿಯು ಸ್ಥಿರವಾಗುವವರೆಗೂ ಐಪಿಒಗೆ ಬರುವುದಿಲ್ಲ’ ಎಂದು ಮೊಬಿಕ್ವಿಕ್‌ ಅಧ್ಯಕ್ಷೆ ಉಪಾಸನಾ ತಕು ತಿಳಿಸಿದ್ದಾರೆ.

2022ರ ನವೆಂಬರ್‌ವರೆಗೂ ಐಪಿಒಗೆ ಅವಕಾಶ ಇದೆ. ಸದ್ಯ, ಮಾರುಕಟ್ಟೆ ವರ್ತನೆಯು ಏರಿಳಿತಗಳಿಂದ ಕೂಡಿದೆ. ಇಂತಹ ಸಂದರ್ಭದಲ್ಲಿ ಅಪಾಯಕ್ಕೆ ಒಡ್ಡಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಕಂಪನಿಯು ಐಪಿಒ ಮೂಲಕ ₹ 1,500 ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ಐಪಿಒಗೆ ಸಲ್ಲಿಸಿರುವ ಕರಡು ದಾಖಲೆ ಪತ್ರಗಳಲ್ಲಿ ಇರುವ ಮಾಹಿತಿಯ ಪ್ರಕಾರ, ಕೋವಿಡ್‌ ಸಾಂಕ್ರಾಮಿಕದಿಂದಾಗಿ ವಹಿವಾಟಿನ ಮೇಲೆ ಪರಿಣಾಮ ಉಂಟಾಗಿದೆ. ಬೈ ನೌ ಪೆ ಲೇಟರ್‌ (ಬಿಎನ್‌ಪಿಎಲ್‌) ವಹಿವಾಟಿನ ಮೌಲ್ಯವು 2020–21ರಲ್ಲಿ ₹ 299.94 ಕೋಟಿಯಷ್ಟಾಗಿದೆ. 2019–20ರಲ್ಲಿ ಇದ್ದ ₹ 485.49 ಕೋಟಿಗೆ ಹೋಲಿಸಿದರೆ ಶೇ 38.22ರಷ್ಟು ಇಳಿಕೆ ಆಗಿದೆ.

ಸದ್ಯ ವಹಿವಾಟು ಕೋವಿಡ್‌ಗೂ ಮುಂಚಿನ ಮಟ್ಟವನ್ನು ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿಎನ್‌ಪಿಎಲ್‌ ವಹಿವಾಟು 22 ಪಟ್ಟು ಹೆಚ್ಚಾಗಿದೆ. ಪಾವತಿ ವಹಿವಾಟು ಮೂರು ಪಟ್ಟು ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು