ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ಏರ್‌ಟೆಲ್‌ನಿಂದ ಮೊಬೈಲ್‌ ಸೇವೆ

Published 23 ಫೆಬ್ರುವರಿ 2024, 20:13 IST
Last Updated 23 ಫೆಬ್ರುವರಿ 2024, 20:13 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ದೂರಸಂಪರ್ಕ ಕಂಪನಿಯಾದ ಭಾರ್ತಿ ಏರ್‌ಟೆಲ್, ವಿಮಾನ ಪ್ರಯಾಣಿಕರಿಗೆ ಮಾರ್ಗಮಧ್ಯೆಯೂ ಮೊಬೈಲ್‌ ಸಂಪರ್ಕ ಸೇವೆ ಕಲ್ಪಿಸಲು ನಿರ್ಧರಿಸಿದ್ದು, ಈ ಸಂಬಂಧ ‘ಏರೊ ಮೊಬೈಲ್‌’ ಸಂಸ್ಥೆಯ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. 

ಏರ್‌ಟೆಲ್‌ ಕಂಪನಿಯು, 19 ವಿಮಾನಯಾನ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಗಳ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೊಬೈಲ್ ಸಂಪರ್ಕ ಸೇವೆ ಲಭಿಸಲಿದೆ.

ಇದಕ್ಕಾಗಿ ದಿನದ 24 ಗಂಟೆಗಳ ಕಾಲ ಸೇವೆ ನೀಡಲು ಪ್ರತ್ಯೇಕ ಸಂಪರ್ಕ ಕೇಂದ್ರವನ್ನು ತೆರೆಯಲಾಗುವುದು. ಗ್ರಾಹಕರ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡಲು ವಾಟ್ಸ್‌ಆ್ಯಪ್‌ ಸೇವೆಯನ್ನೂ ಒದಗಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣಿಸುವ ವೇಳೆ ಕರೆ, ಎಸ್‌ಎಂಎಸ್‌ ಮತ್ತು ಡಾಟಾ ಸೇವೆ ಪಡೆದುಕೊಳ್ಳಬಹುದಾಗಿದೆ. ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಈ ಸೌಲಭ್ಯ ನೀಡಲು ಏರ್‌ಟೆಲ್‌ ಮುಂದಾಗಿದೆ. ₹195, ₹295 ಹಾಗೂ ₹595 ದರದಲ್ಲಿ ಮೂರು ರೋಮಿಂಗ್‌ ಪ್ಯಾಕೇಜ್‌ಗಳನ್ನು ಘೋಷಿಸಿದ್ದು, ಇವುಗಳ ಬಳಕೆಯು ಒಂದು ದಿನಕ್ಕೆ ಸೀಮಿತವಾಗಿದೆ.

ಭಾರ್ತಿ ಏರ್‌ಟೆಲ್‌ನ ನಿರ್ದೇಶಕ (ಗ್ರಾಹಕರ ಅನುಭವ ಮತ್ತು ಮಾರುಕಟ್ಟೆ ವಿಭಾಗ) ಅಮಿತ್ ತ್ರಿಪಾಠಿ ಮಾತನಾಡಿ, ‘ವಿಮಾನದ ಪ್ರಯಾಣಿಕರಿಗೆ ಮೊಬೈಲ್‌ ಸೇವೆ ಒದಗಿಸಲು ಕಂಪನಿ ಮುಂದಾಗಿರುವುದು ಹೆಮ್ಮೆಯ ವಿಷಯ. ಪಯಣದ ವೇಳೆ ಪ್ರಯಾಣಿಕರು ತಮ್ಮ ಪ್ರೀತಿಪಾತ್ರರ ಜೊತೆಗೆ ಸಂಭಾಷಿಸಲು ಇದರಿಂದ ಅನುಕೂಲವಾಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT