ಭಾನುವಾರ, ನವೆಂಬರ್ 27, 2022
27 °C

‘ಫೌಂಡಿಟ್‌’ ಆಗಿ ಬದಲಾದ ಮಾನ್‌ಸ್ಟರ್‌ ಡಾಟ್‌ ಕಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉದ್ಯೋಗ ಹುಡುಕಾಟದ ವೇದಿಕೆಯಾಗಿರುವ ‘ಮಾನ್‌ಸ್ಟರ್‌ ಡಾಟ್‌ ಕಾಂ’ ಬುಧವಾರದಿಂದ ‘ಫೌಂಡಿಟ್‌’ ಎನ್ನುವ ಹೆಸರಿನಲ್ಲಿ ಪ್ರತಿಭೆ ನಿರ್ವಹಣಾ ವೇದಿಕೆಯಾಗಿ ಕಾರ್ಯಾಚರಣೆ ಆರಂಭಿಸಿದೆ.

ಈ ಪರಿವರ್ತನೆಯ ಮೂಲಕ ಏಷ್ಯಾ ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯದಲ್ಲಿ ಉದ್ಯೋಗದಾತ ಕಂಪನಿಗಳು ಮತ್ತು ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ತಂತ್ರಜ್ಞಾನ ಆಧಾರಿತ ಸೇವೆ ಒದಗಿಸಲಾಗುವುದು. 18 ದೇಶಗಳಲ್ಲಿ ಉದ್ಯೋಗ ಹುಡುಕುತ್ತಿರುವ 7 ಕೋಟಿಗೂ ಅಧಿಕ ಜನರು ಮತ್ತು 10 ಸಾವಿರ ಕಂಪನಿಗಳಿಗೆ ಸೇವೆ ಒದಗಿಸಲಾಗುತ್ತದೆ ಎಂದು ಕಂಪನಿಯು ತಿಳಿಸಿದೆ.

ಹೊಸ ಬ್ರ್ಯಾಂಡ್‌ ಅನಾವರಣ ಮಾಡಿದ ಫೌಂಡಿಟ್‌ ಡಾಟ್‌ ಇನ್‌ ಸಿಇಒ ಶೇಖರ್‌ ಗರಿಸಾ, ‘ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಕೃತಕ ಬುದ್ಧಿಮತ್ತೆ (ಎ.ಐ.), ದತ್ತಾಂಶ ಮತ್ತು ದತ್ತಾಂಶ ವಿಶ್ಲೇಷಣಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಕಂಪನಿ ಮುಂದಾಗಿದೆ.

‘ಉದ್ಯೋಗದ ಹುಡುಕಾಟ ನಡೆಸುವವರಿಗೆ ಅವರ ಪ್ರೊಫೈಲ್‌ ಅನ್ನು ಹೆಚ್ಚು ಆಕರ್ಷಕವಾಗಿಸಲು, ಕೌಶಲ ವೃದ್ಧಿಗೆ ಗಮನ ಹರಿಸುವಂತೆ ಮಾಡುವ ಜೊತೆಗೆ ಇನ್ನೂ ಹಲವು ವೈಯಕ್ತಿಕ ಸೇವೆಗಳನ್ನು ಸಹ ಫೌಂಡಿಟ್‌ ನೀಡಲಿದೆ’ ಎಂದು ಮಾಹಿತಿ ನೀಡಿದರು.

‘ಮಾರುಕಟ್ಟೆಯಲ್ಲಿ ಕೌಶಲ ಆಧಾರಿತ ನೇಮಕಾತಿಗೆ ವೇಗ ದೊರೆಯುವ ನಿರೀಕ್ಷೆ ಇದೆ. ಇಂತಹ ಸಂದರ್ಭದಲ್ಲಿ ‘ಫೌಂಡಿಟ್‌ ಡಾಟ್‌ ಇನ್‌’ ಮೂಲಕ ಉದ್ಯೋಗದಾತ ಮತ್ತು ಉದ್ಯೋಗದ ಹುಡುಕಾಟದಲ್ಲಿ ಇರುವ ಇಬ್ಬರಿಗೂ ಮಾನವನ ಜಾಣ್ಮೆ ಮತ್ತು ತಂತ್ರಜ್ಞಾನದ ಸಂಯೋಜನೆಯನ್ನು ಒಳಗೊಂಡು ವೇದಿಕೆಯನ್ನು ನೀಡಿದ್ದೇವೆ’ ಎಂದು ಫೌಂಡಿಟ್‌ ಡಾಟ್‌ ಇನ್‌ನ ಮಾತೃಸಂಸ್ಥೆ ಕ್ವೆಸ್‌ ಕಾರ್ಪ್‌ನ ಸ್ಥಾಪಕ ಅಜಿತ್‌ ಐಸಾಕ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು