ಮಂಗಳವಾರ, ನವೆಂಬರ್ 24, 2020
27 °C

ಜಿಡಿಪಿ ದರ ಪರಿಷ್ಕರಿಸಿದ ಮೂಡೀಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವೀಸಸ್‌ ಕಂಪನಿಯು ಭಾರತದ ಜಿಡಿಪಿ ಬೆಳವಣಿಗೆಯ ಕುರಿತು ತನ್ನ ಈ ಹಿಂದಿನ ಅಂದಾಜನ್ನು ಪರಿಷ್ಕರಿಸಿದೆ.

2020ನೇ ಕ್ಯಾಲೆಂಡರ್ ವರ್ಷದಲ್ಲಿ ಜಿಡಿಪಿ ಶೇ (–)9.6ರಷ್ಟಿರಲಿದೆ ಎಂದು ಈ ಹಿಂದೆ ಹೇಳಿತ್ತು. ಆದರೆ, ಪರಿಷ್ಕೃತ ಅಂದಾಜಿನಲ್ಲಿ ಜಿಡಿಪಿ ಬೆಳವಣಿಗೆಯು ಶೇ (–)8.9ರಷ್ಟಾಗಲಿದೆ ಎಂದು ಮೂಡೀಸ್ ಹೇಳಿದೆ.

ದೇಶದಾದ್ಯಂತ ದೀರ್ಘಾವಧಿಯ ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣದಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ (–) 23.9ರಷ್ಟು ಗರಿಷ್ಠ ಮಟ್ಟದ ಕುಸಿತ ಕಂಡಿದೆ ಎಂದು ಅದು ತಿಳಿಸಿದೆ.

ಭಾರತದಲ್ಲಿ 69 ದಿನಗಳವರೆಗೆ ಲಾಕ್‌ಡೌನ್‌ ಜಾರಿಯಲ್ಲಿತ್ತು. ಅದಲ್ಲದೆ ಸ್ಥಳೀಯವಾಗಿಯೂ ಮತ್ತು ರಾಜ್ಯಗಳ ಮಟ್ಟದಲ್ಲಿಯೂ ನಿರ್ಬಂಧಗಳು ಇದ್ದವು. ನಿರ್ಬಂಧಗಳನ್ನು ಹಂತ ಹಂತವಾಗಿ ತೆಗೆಯಲಾಗುತ್ತಿದೆ. ಕಂಟೈನ್‌ಮೆಂಟ್‌ ವಲಯಗಳ ಮಟ್ಟದ ನಿರ್ಬಂಧ ಜಾರಿಯಲ್ಲಿದೆ. ಹೀಗಾಗಿ ಆರ್ಥಿಕ ಚೇತರಿಕೆಯು ಬಹಳ ಸಣ್ಣ ಮಟ್ಟದಲ್ಲಿದೆ ಎಂದು ಮೂಡೀಸ್‌ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು