ಗದಗ: ಶ್ರೀಲಂಕಾದ ರತ್ನಪುರದಲ್ಲಿ ನಡೆದ ಮೊದಲ ಸೌಥ್ ಏಷ್ಯನ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ಶಿಪ್ನ ಸಿಟ್ಟಿಂಗ್ ಥ್ರೋಬಾಲ್ ಪಂದ್ಯದಲ್ಲಿ ಭಾರತದ ವನಿತೆಯರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದು, ಈ ತಂಡವನ್ನು ಮುನ್ನಡೆಸಿದವರು ಗದಗ ನಗರದ ಮಾಲತಿ ಇನಾಮತಿ ಎಂಬುದು ವಿಶೇಷವಾಗಿದೆ.

ಶ್ರೀಲಂಕಾ ಪ್ಯಾರಾ ಥ್ರೋಬಾಲ್ ಫೆಡರೇಷನ್ ಆಯೋಜಿಸಿದ್ದ ಸೌಥ್ ಏಷ್ಯನ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ಶಿಪ್ ಇದೇ ತಿಂಗಳ 6 ಮತ್ತು 7ರಂದು ನಡೆದಿತ್ತು. ಭಾರತ ತಂಡದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಒಟ್ಟು 14 ಮಂದಿ ಆಟಗಾರರು ಪಾಲ್ಗೊಂಡಿದ್ದರು.

ಗದಗ ನಗರದ ಮಾಲತಿ ಇನಾಮತಿ ಅವರ ನಾಯಕತ್ವದಲ್ಲಿ ಭಾರತ ತಂಡ ಶ್ರೇಷ್ಠ ಪ್ರದರ್ಶನ ನೀಡಿತು. ಭಾರತ ಮತ್ತು ನೇಪಾಳದ ನಡುವೆ ನಡೆದ ಪಂದ್ಯದಲ್ಲಿ 2–0 ಅಂತರದಲ್ಲಿ ಗೆಲುವು ದಾಖಲಿಸಿತು.

ಫೈನಲ್ ಪಂದ್ಯವು ಮೂರು ಸೀರಿಸ್ ಪಂದ್ಯಗಳ ರೂಪದಲ್ಲಿ ನಡೆಯಿತು. (ಪ್ರತಿ ಸೀರಿಸ್ ಮೂರು ಪಂದ್ಯಗಳು, ಪ್ರತಿ ಪಂದ್ಯಕ್ಕೆ 21 ಪಾಯಿಂಟ್ಗಳು). ಇದರಲ್ಲಿ ಭಾರತ ತಂಡ ಶ್ರೀಲಂಕಾವನ್ನು 2–0 ಅಂತರದಲ್ಲಿ ಸೋಲಿಸಿ ಚಿನ್ನದ ಪದಕ ಹಾಗೂ ಮೊದಲ ಮಹಿಳಾ ಸೌತ್ ಏಷ್ಯಾ ಪ್ರಶಸ್ತಿಯನ್ನು ಗೆದ್ದು, ಬೀಗಿತು.

ಕ್ರೀಡಾಪಟುವಾದರು ಸಾಫ್ಟ್ವೇರ್ ಎಂಜನಿಯರ್: ಮಾಲತಿ ಅವರಿಗೆ ಮೊದಲಿನಿಂದಲೂ ಕ್ರೀಡೆಯ ಬಗ್ಗೆ ಆಸಕ್ತಿ ಇತ್ತು. ಕಾಲೇಜು ದಿನಗಳಲ್ಲಿ ಥ್ರೋಬಾಲ್, ಟೇಬಲ್ ಟೆನಿಸ್ನಲ್ಲಿ ಪ್ರಶಸ್ತಿಗಳನ್ನೂ ಪಡೆದಿದ್ದರು. ಓದು ಮುಗಿದ ನಂತರ ಬೆಂಗಳೂರಿನಲ್ಲಿ 13 ವರ್ಷ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಈ ನಡುವೆ 2016ರಲ್ಲಿ ನಡೆದ ಅಪಘಾತದಲ್ಲಿ ಮಾಲತಿ ಅಂಗವೈಕಲ್ಯಕ್ಕೆ ತುತ್ತಾದರು. ಬಳಿಕ ಕೋವಿಡ್–19ನಿಂದಾಗಿ ಕೆಲಸ ಬಿಟ್ಟು ಗದಗಕ್ಕೆ ಬಂದರು.

2021ರಿಂದ ಡಿಸ್ಕಸ್ ಥ್ರೋ, ಶಾಟ್ಪಟ್ ಅಭ್ಯಾಸ ನಡೆಸಿದರು. ಪ್ಯಾರಾ ಥ್ರೋಬಾಲ್ನಲ್ಲಿ ಆಡುವ ಅವಕಾಶ ಪಡೆದರು. ಡಿಸ್ಕಸ್ ಥ್ರೋ, ಶಾಟ್ಪಟ್ ಅಭ್ಯಾಸ ಥ್ರೋಬಾಲ್ ಕ್ರೀಡೆಗೆ ನೆರವಾಯಿತು ಎಂದು ಮಾಲತಿ ತಿಳಿಸಿದರು.

ಗದಗ ನಗರದಲ್ಲಿ ಮಾಲತಿ ಅವರೇ ಪ್ಯಾರಾ ಸಿಟ್ಟಿಂಗ್ ಥ್ರೋಬಾಲ್ ತಂಡ ಕಟ್ಟಿದ್ದು, ಪ್ರತಿಸಿನ ಎಂಟು ಮಂದಿ ಅಭ್ಯಾಸ ನಡೆಸುತ್ತಾರೆ.

ಹೇಗಿರುತ್ತದೆ ಪ್ಯಾರಾ ಸಿಟ್ಟಿಂಗ್ ಥ್ರೋಬಾಲ್?: ಇದು ಕುಳಿತುಕೊಂಡು ಆಡುವ ಥ್ರೋಬಾಲ್ ಕ್ರೀಡೆಯಾಗಿದೆ. ಮಾಮೂಲಿ ಥ್ರೋಬಾಲ್ ಕ್ರೀಡೆಗಿಂತ ತುಸು ಭಿನ್ನ. ಅಂಕಣ ಕೂಡ ಚಿಕ್ಕದು. ನಿಯಮಗಳಲ್ಲಿ ಸ್ವಲ್ಪ ಬದಲಾವಣೆಗಳು ಇರುತ್ತವೆ. ತಂಡದಲ್ಲಿ ಆಡುವುದು ಏಳು ಮಂದಿಯಾದರೂ, ಹೆಚ್ಚುವರಿ ಆಟಗಾರರು ಏಳು ಮಂದಿ ಇರುತ್ತಾರೆ. ತಂಡದಲ್ಲಿ ಒಟ್ಟು 14 ಮಂದಿ ಇರುತ್ತಾರೆ.

ಮುಂದೆ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಅದಕ್ಕಾಗಿ ತಯಾರಿ ನಡೆದಿದೆ. ಅಂಗವಿಕಲ ಕ್ರೀಡಾಪಟುಗಳಿಗೆ ಸರ್ಕಾರದ ನೆರವಿನ ಅವಶ್ಯಕತೆ ತುಂಬ ಇದೆ
ಮಾಲತಿ ಇನಾಮತಿ ಪ್ಯಾರಾ ಸಿಟ್ಟಿಂಗ್ ಥ್ರೋಬಾಲ್ ಭಾರತ ತಂಡದ ನಾಯಕಿ

ಕ್ರೀಡಾಪಟುಗಳಿಗೆ ಬೇಕಿದೆ ನೆರವು

‘ಅಂಗವಿಕಲ ಕ್ರೀಡಾಪಟುಗಳಿಗೆ ಕ್ರೀಡಾಪ್ರೇಮಿಗಳು ಕಂಪನಿಗಳು ಹಾಗೂ ಸರ್ಕಾರದ ಕಡೆಯಿಂದ ಆರ್ಥಿಕ ನೆರವು ಸಿಕ್ಕರೆ ಹೆಚ್ಚಿನ ಸಾಧನೆ ಸಾಧ್ಯ’ ಎನ್ನುತ್ತಾರೆ ಮಾಲತಿ ಇನಾಮತಿ. ‘ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ ಕ್ರೀಡಾಪಟುಗಳಿಗೆ ಸರ್ಕಾರದಿಂದ ನೆರವು ಸಿಗುತ್ತದೆ. ಆದರೆ ಅದು ಕ್ರೀಡಾಪಟುಗಳ ಕೈಸೇರುವ ಪ್ರಕ್ರಿಯೆ ತುಂಬ ದೀರ್ಘವಾಗಿದೆ. ಇದು ತ್ವರಿತವಾಗಿ ಸಿಕ್ಕರೆ ಅನುಕೂಲವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.