ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತೂಟ್‌ ಫೈನಾನ್ಸ್‌ ಅಧ್ಯಕ್ಷ ಎಂ.ಜಿ. ಜಾರ್ಜ್‌ ಮುತ್ತೂಟ್ ನಿಧನ

Last Updated 7 ಮಾರ್ಚ್ 2021, 4:07 IST
ಅಕ್ಷರ ಗಾತ್ರ

ನವದೆಹಲಿ: ಮುತ್ತೂಟ್‌ ಫೈನಾನ್ಸ್‌ನ ಅಧ್ಯಕ್ಷ ಎಂ.ಜಿ.ಜಾರ್ಜ್‌ ಮುತ್ತೂಟ್ (71) ಅವರು ಶುಕ್ರವಾರ ಸಂಜೆ ನಿಧನರಾಗಿದ್ದಾರೆ ಎಂದು ಕಂಪನಿಯು ಶನಿವಾರ ಷೇರುಪೇಟೆಗೆ ಮಾಹಿತಿ ನೀಡಿದೆ. ಆದರೆ ಅವರ ನಿಧನದ ಕಾರಣವನ್ನು ಕಂಪನಿ ತಿಳಿಸಿಲ್ಲ.

ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಕುಟುಂಬದ ಮೂಲಗಳು ‘ಅವರು ಮನೆಯಲ್ಲಿ ಕುಸಿದು ಬಿದ್ದರು. ‌ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ತಿಳಿಸಿವೆ. ಜಾರ್ಜ್ ಅವರಿಗೆ ಪತ್ನಿ ಸಾರಾ ಜಾರ್ಜ್‌ ಮತ್ತು ಇಬ್ಬರು ಮಕ್ಕಳಿದ್ದಾರೆ.

ಮುತ್ತೂಟ್‌ ಫೈನಾನ್ಸ್ ಕಂಪನಿಯನ್ನು ಹೊಸ ಎತ್ತರಕ್ಕೆ ಒಯ್ಯುವಲ್ಲಿ ಹಾಗು ದೇಶದಾದ್ಯಂತ ಮತ್ತು ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ವಹಿವಾಟು ವಿಸ್ತರಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಚಿನ್ನದ ಸಾಲವನ್ನು ಸಂಘಟಿತ ವ್ಯವಹಾರವನ್ನಾಗಿ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾದದ್ದು.

ಕೊಚ್ಚಿಯಲ್ಲಿ ಮುಖ್ಯ ಕಚೇರಿ ಹೊಂದಿದ್ದು, ಇದು ಕೇರಳದ ಅತಿದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದೆ.

ಅವರು 1949ರ ನವೆಂಬರ್‌ನಲ್ಲಿಕೇರಳದ ಕೋಯೆನ್‌ಚೇರಿಯಲ್ಲಿ (ಇಂದಿನ ಪಟ್ಟನಂತಿಟ್ಟ) ಜನಿಸಿದರು. ಮಣಿಪಾಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ,ಕಚೇರಿ ಸಹಾಯಕರಾಗಿ ಮುತ್ತೂಟ್‌ ಕುಟುಂಬದ ವ್ಯವಹಾರವನ್ನು ಸೇರಿಕೊಂಡರು. 1979ರಲ್ಲಿವ್ಯವಸ್ಥಾಪಕ ನಿರ್ದೇಶಕರಾದರು. 1993ರ ಫೆಬ್ರುವರಿಯಲ್ಲಿ ಸಮೂಹದ ಅಧ್ಯಕ್ಷರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT