ಮುಂಬೈ: ಮ್ಯೂಚುವಲ್ ಫಂಡ್ಗಳಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡುವ ಮಹಿಳಾ ಹೂಡಿಕೆದಾರರ ಹೂಡಿಕೆಗೆ ಹೆಚ್ಚುವರಿ ಉತ್ತೇಜನ ನೀಡಲು ಯೋಜಿಸಲಾಗಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಮಹಿಳೆಯರು ಸಮಾನವಾಗಿ ಪ್ರತಿನಿಧಿಸದ ಹೊರತು ಆರ್ಥಿಕ ಒಳಗೊಳ್ಳುವಿಕೆ ಪೂರ್ಣವಾಗದು ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್ಐ) ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಮ್ಯೂಚುವಲ್ ಫಂಡ್ಗಳಲ್ಲಿ (ಎಂ.ಎಫ್) ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡಲು ಉತ್ತೇಜನ ನೀಡಬೇಕಿದೆ. ಇದಕ್ಕಾಗಿ ಅವರು ಮಾಡುವ ಹೂಡಿಕೆಗೆ ಹೆಚ್ಚುವರಿ ಉತ್ತೇಜನ ನೀಡಬೇಕಿದೆ. ಇದು ಹೊಸ ಸದಸ್ಯರನ್ನು ಹೆಚ್ಚಿಸುವುದಲ್ಲದೆ, ಮ್ಯೂಚುವಲ್ ಫಂಡ್ ಉದ್ಯಮವು ಎಲ್ಲಾ ಗುಂಪುಗಳಿಗೂ ತಲುಪಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.