ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಜಾರಾ – ವೊಡಾಫೋನ್ ಐಡಿಯಾ ಒಪ್ಪಂದ

Last Updated 17 ಮಾರ್ಚ್ 2022, 6:18 IST
ಅಕ್ಷರ ಗಾತ್ರ

ಬೆಂಗಳೂರು: ನಜಾರಾ ಟೆಕ್ನಾಲಜೀಸ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು, ವೊಡಾಫೋನ್ ಐಡಿಯಾ ಗ್ರಾಹಕರಿಗೆ ‘ವಿ’ ಆ್ಯಪ್‌ ಮೂಲಕ 1,200ಕ್ಕೂ ಹೆಚ್ಚು ಮೊಬೈಲ್ ಗೇಮ್‌ಗಳು ಲಭ್ಯವಾಗಲಿವೆ.

ಮನರಂಜನಾ ವಿಭಾಗದಲ್ಲಿ ಗೇಮಿಂಗ್‌ ವಲಯವು ಬಹುದೊಡ್ಡ ಪಾಲು ಹೊಂದಿದೆ. ಈ ವರ್ಷದ ಕೊನೆಯೊಳಗೆ ದೇಶದಲ್ಲಿ ಒಟ್ಟು 50 ಕೋಟಿ ಜನರನ್ನು ಇದು ತಲುಪಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ಗ್ರಾಹಕರು ಮೋಜಿನಿಂದ ಸಮಯ ಕಳೆಯಲು ಹೆಚ್ಚು ಆಯ್ಕೆ ಮಾಡಿಕೊಳ್ಳುವುದು ಮೊಬೈಲ್ ಗೇಮ್‌ಗಳನ್ನು ಎಂದು ವೊಡಾಫೋನ್ ಐಡಿಯಾ ಹೇಳಿದೆ.

ಡೆಲಾಯ್ಟ್ ಮತ್ತು ಸಿಐಐ ಜಂಟಿಯಾಗಿ ಸಿದ್ಧಪಡಿಸಿರುವ ವರದಿಯೊಂದರ ಅನ್ವಯ ದೇಶದ ಗ್ರಾಹಕರು 4 ಗಂಟೆಗಿಂತ ಹೆಚ್ಚು ಅವಧಿಯನ್ನು ಮೊಬೈಲ್‌ ಆಟಗಳಿಗಾಗಿ ವಿನಿಯೋಗಿಸುತ್ತಾರೆ ಎಂದೂ ಕಂಪನಿಯು ಹೇಳಿದೆ. ವೊಡಾಫೋನ್ ಐಡಿಯಾ ಗ್ರಾಹಕರಿಗೆ ಮೂರು ವಿಭಾಗಗಳಲ್ಲಿ ಗೇಮ್‌ಗಳು ಲಭ್ಯವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT