ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲನ್ ಕಾಲ್‌ರಾಕ್‌ ಒಕ್ಕೂಟಕ್ಕೆ ಜೆಟ್‌ ಏರ್‌ವೇಸ್‌ ಮಾಲೀಕತ್ವ

Last Updated 14 ಜನವರಿ 2023, 20:02 IST
ಅಕ್ಷರ ಗಾತ್ರ

ಮುಂಬೈ: ಆರ್ಥಿಕವಾಗಿ ದಿವಾಳಿ ಆಗಿರುವ ಜೆಟ್‌ ಏರ್‌ವೇಸ್ ವಿಮಾನಯಾನ ಕಂಪನಿಯ ಮಾಲೀಕತ್ವವನ್ನು ಜಲನ್‌ ಕಾಲ್‌ರಾಕ್‌ ಒಕ್ಕೂಟಕ್ಕೆ ವರ್ಗಾಯಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಒಪ್ಪಿಗೆ ನೀಡಿದೆ.

ಜೆಟ್‌ ಏರ್‌ವೇಸ್‌ ಕಂಪನಿಗೆ ಸಾಲ ನೀಡಿರುವ ಸಂಸ್ಥೆಗಳಿಗೆ ಬಾಕಿ ಪಾವತಿಸಲು ಒಕ್ಕೂಟಕ್ಕೆ ಆರು ತಿಂಗಳ ಕಾಲಾವಕಾಶವನ್ನು ಸಹ ನ್ಯಾಯಮಂಡಳಿ ನೀಡಿದೆ.

ಬಾಕಿ ಪಾವತಿಸಲು ಈ ಹಿಂದಿನ ಆದೇಶದಲ್ಲಿ 2022ರ ನವೆಂಬರ್‌ 16ರವರೆಗೆ ಅವಕಾಶ ನೀಡಲಾ
ಗಿತ್ತು. ಕಂಪನಿಯ ಪುನಶ್ಚೇತನ ಯೋಜನೆಯಡಿ ಒಕ್ಕೂಟವು ಈವರೆಗೆ ₹150 ಕೋಟಿ ಮೊತ್ತವನ್ನು ಬ್ಯಾಂಕ್‌ ಖಾತರಿಯಾಗಿ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT