ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಿಎಂಡಬ್ಲ್ಯು ಎಕ್ಸ್ 5ಎಲ್ಲಾ ರಸ್ತೆಗಳಿಗೂ ಸೈ

ಬಿಎಂಡಬ್ಲ್ಯು ಎಕ್ಸ್5 ಎಸ್‌ಎವಿ ಮಾರುಕಟ್ಟೆಗೆ
Last Updated 17 ಮೇ 2019, 20:30 IST
ಅಕ್ಷರ ಗಾತ್ರ

ಮುಂಬೈ: ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು, ನಾಲ್ಕನೇ ಪೀಳಿಗೆಯ ಹೊಸ ಎಕ್ಸ್5 ಸ್ಪೋರ್ಟ್ಸ್‌ ಆ್ಯಕ್ಟಿವಿಟಿ ವೆಹಿಕಲ್‌ ಅನ್ನು (ಎಸ್‌ಎವಿ) ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸ್ಥಳೀಯವಾಗಿಯೇ ತಯಾರಿಸಿರುವ ‘ಎಸ್‌ಎವಿ’, ಗಾತ್ರದಲ್ಲಿ ತುಸು ದೊಡ್ಡದಾಗಿದೆ. ಆಕರ್ಷಕ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ. ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಹೊಸ ‘ಎಸ್‌ಎವಿ’ ಬಿಡುಗಡೆ ಮಾಡಿದರು. ಡೀಸೆಲ್ ಮಾದರಿಯ ‘ಎಸ್‌ಎವಿ’ ಕಂಪನಿಯ ಅಧಿಕೃತ ಮಾರಾಟ ಮಳಿಗೆಗಳಲ್ಲಿ ತಕ್ಷಣದಿಂದಲೇ ಖರೀದಿಗೆ ಲಭ್ಯ ಇದೆ. ಪೆಟ್ರೋಲ್ ಚಾಲಿತ ಮಾದರಿಯು ಮಾರುಕಟ್ಟೆಗೆ ಬರಲು ಕೊಂಚ ವಿಳಂಬವಾಗಲಿದೆ.

‘1999ರಲ್ಲಿ ಬಿಎಂಡಬ್ಲ್ಯು ಎಕ್ಸ್‌5 ಮೂಲಕ ಭಾರತದಲ್ಲಿ ‘ಎಸ್‌ಎವಿ’ ಪರಿಚಯಿಸಿತ್ತು. ಹಲವಾರು ವರ್ಷಗಳವರೆಗೆ ಈ ಕಾರ್‌ ಮಾರಾಟ ಮುಂಚೂಣಿಯಲ್ಲಿತ್ತು. ಇದು ನಮ್ಮ ಅತ್ಯಂತ ಯಶಸ್ವಿ ಕಾರ್‌ ಮಾದರಿ ಆಗಿದೆ. ಸಂಪೂರ್ಣ ಹೊಸದಾದ ಬಿಎಂಡಬ್ಲ್ಯು ಎಕ್ಸ್‌5 ನಮ್ಮ ಯಶಸ್ಸಿಗೆ ಇನ್ನೊಂದು ಹೊಸ ಸೇರ್ಪಡೆಯಾಗಲಿದೆ’ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ಹ್ಯಾನ್ಸ್‌ ಕ್ರಿಸ್ಟಿನ್‌ ಬೈರ್ಟೆಲ್ಸ್‌ ಹೇಳಿದ್ದಾರೆ.

ವೈಶಿಷ್ಟ್ಯ: ಗಾತ್ರದಲ್ಲಿ ದೊಡ್ಡದಾಗಿದೆ. ಬೂಟ್‌ ಸ್ಪೇಸ್‌ 650 ಲೀಟರಿನಿಂದ 1870 ಲೀಟರಿಗೆ ಹೆಚ್ಚಿಸಲಾಗಿದ್ದು, ಎಲ್ಲಾ ರೀತಿಯ ಪ್ರಯಾಣಕ್ಕೂ ಹೊಂದುವಂತಿದೆ. ಕಾರಿನಲ್ಲಿನ ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ಪ್ರೊಫೆಷನಲ್ 12.3 ಇಂಚಿನ ಡಿಸ್‌ಪ್ಲೇ ಇದ್ದು, ಸ್ಪರ್ಶ ಮತ್ತು ಮತ್ತು ಧ್ವನಿ ಮೂಲಕ ನಿಯಂತ್ರಿಸಬಹುದು.

ಗೆಸ್ಚರ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಬಿಎಂಡಬ್ಲ್ಯು ಹೆಡ್ ಅಪ್ ಡಿಸ್ ಪ್ಲೇ ಮತ್ತು ವೈರ್‌ಲೆಸ್ ಆ್ಯಪಲ್ ಕಾರ್ ಪ್ಲೇ ಒಳಗೊಂಡಿದೆ. ಪಾರ್ಕಿಂಗ್ ಅಸಿಸ್ಟಂಟ್ ಪ್ಲಸ್ ಸೌಲಭ್ಯವು ಚಾಲನೆಯನ್ನು ಸುಲಭಗೊಳಿಸಲಿದೆ.

3 ಲೀಟರ್ 6 ಸಿಲಿಂಡರ್ ಡೀಸೆಲ್ ಎಂಜಿನ್ ಮತ್ತು 3 ಲೀಟರ್ 6 ಸಿಲಿಂಡರ್ ಬಿಎಸ್ 6 ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಆಟೊಮೆಟಿಕ್ ಡಿಫರೆನ್ಶಿಯೇಟ್ ಬ್ರೇಕ್ಸ್/ಲಾಕ್ಸ್ (ಎಡಿಬಿ-ಎಕ್ಸ್), ಎಕ್ಸೆಟೆಂಡೆಡ್ ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಸೌಲಭ್ಯಗಳು ಯಾವುದೇ ವಿಧದ ರಸ್ತೆಯಲ್ಲಿ ಚಲಾಯಿಸಲು ನೆರವಾಗುತ್ತವೆ. 6 ಏರ್ ಬ್ಯಾಗ್, ಐಎಸ್ ಒಎಫ್ಐಎಕ್ಸ್ ಚೈಲ್ಡ್ ಸೀಟ್ ಮೌಂಟಿಂಗ್ ಮತ್ತು ಎಮರ್ಜೆನ್ಸಿ ಸ್ಪೇರ್ ವೀಲ್ ಇದೆ.

ಡೀಸೆಲ್‌ ಚಾಲಿತ ‘ಎಸ್‌ಎವಿ’ ಎರಡು ಮಾದರಿಗಳಲ್ಲಿ ಲಭ್ಯ ಇರಲಿದೆ. ನಾಲ್ಕು ಬಣ್ಣಗಳಲ್ಲಿ ದೊರೆಯಲಿದೆ. ಎಕ್ಸ್‌ಡ್ರೈವ್‌30ಡಿ ಸ್ಪೋರ್ಟ್‌ ಎಕ್ಸ್‌ಷೋರೂಂ ಬೆಲೆ ₹ 72.90 ಲಕ್ಷ, ಎಕ್ಸ್‌ಡ್ರೈವ್‌30ಡಿ ಎಕ್ಸ್‌ಲೈನ್‌ ಬೆಲೆ ₹ 82.40 ಲಕ್ಷ ಇದೆ. ಪೆಟ್ರೋಲ್‌ ಚಾಲಿತ ಎಕ್ಸ್‌ಡ್ರೈವ್‌40ಐ ಎಂ ಸ್ಪೋರ್ಟ್‌ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ. .

(ವರದಿಗಾರ, ಸಂಸ್ಥೆಯ ಆಹ್ವಾನದ ಮೇರೆಗೆ ಮುಂಬೈಗೆ ತೆರಳಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT