ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ತರಲು ಉದ್ದೇಶಿಸಿರುವ ಬದಲಾವಣೆಗಳು ಮುಂದೊಂದು ಕಾಲಘಟ್ಟದಲ್ಲಿ ಒಂದೇ ಹಂತದ ತೆರಿಗೆ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಿರುವ ಜಿಎಸ್ಟಿ ವ್ಯವಸ್ಥೆಯಲ್ಲಿ ಬದಲಾವಣೆ ತಂದು, ಎರಡು ಹಂತಗಳ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದು ಜಾರಿಗೆ ಬಂದರೆ ಬಹುತೇಕ ಸರಕುಗಳು ಮತ್ತು ಸೇವೆಗಳು ಶೇ 5 ಹಾಗೂ ಶೇ 18ರ ತೆರಿಗೆ ಹಂತದ ವ್ಯಾಪ್ತಿಗೆ ಬರಲಿವೆ.

ಈ ವ್ಯವಸ್ಥೆಯು ಅರ್ಥವ್ಯವಸ್ಥೆಗೆ ಹೊಸ ಚೈತನ್ಯ ನೀಡಲಿದೆ, ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿರುವ ಭಾರಿ ಸುಂಕದ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತಾವಿತ ಹೊಸ ತೆರಿಗೆ ಹಂತಗಳಿಗೆ ಜಿಎಸ್ಟಿ ಮಂಡಳಿಯ ಒಪ್ಪಿಗೆ ಅಗತ್ಯ. ಪ್ರಸ್ತಾವಿತ ಬದಲಾವಣೆಗಳನ್ನು ‘ಮುಂದಿನ ತಲೆಮಾರಿನ ಜಿಎಸ್ಟಿ’ ಎಂದು ಬಣ್ಣಿಸಲಾಗಿದೆ.

ಪ್ರಸ್ತಾವಿತ ಬದಲಾವಣೆಗಳು, ದಿನನಿತ್ಯದ ಬಳಕೆಯ ಬಹುತೇಕ ಸರಕುಗಳನ್ನು, ಉತ್ಪನ್ನಗಳನ್ನು ಕೆಳಗಿನ ತೆರಿಗೆ ಹಂತಕ್ಕೆ ತರುತ್ತವೆ. ಇದರಿಂದ ದಿನಬಳಕೆಯ ಉತ್ಪನ್ನಗಳ ಬೆಲೆ ತಗ್ಗುತ್ತದೆ. ಆಗ ಮಾರುಕಟ್ಟೆಯಲ್ಲಿ ಅವುಗಳಿಗೆ ಬೇಡಿಕೆ ಹೆಚ್ಚುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

‘ಮಧ್ಯಮ ವರ್ಗದವರು, ಬಡವರು, ರೈತರು ಮತ್ತು ಎಂಎಸ್ಎಂಇ ವಲಯವನ್ನು ಗಮನದಲ್ಲಿ ಇಟ್ಟುಕೊಂಡು ನಾವು ಮುಂದಿನ ತಲೆಮಾರಿನ ಜಿಎಸ್ಟಿ ವ್ಯವಸ್ಥೆಯ ಬಗ್ಗೆ ಸಲಹೆ ನೀಡಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವ್ಯವಸ್ಥೆಯು ಜಾರಿಗೆ ಬಂದು, ಭಾರತವು ಅಭಿವೃದ್ಧಿ ಹೊಂದಿದ ದೇಶ ಆದ ನಂತರದಲ್ಲಿ ಒಂದೇ ಹಂತದ ತೆರಿಗೆ ವ್ಯವಸ್ಥೆ ಇರುವ ಜಿಎಸ್ಟಿ ಬಗ್ಗೆ ಆಲೋಚನೆ ನಡೆಸಬಹುದು ಎಂದು ಅವರು ವಿವರಿಸಿದ್ದಾರೆ. ಆದಾಯ ಹಾಗೂ ಕೊಳ್ಳುವ ಶಕ್ತಿಯಲ್ಲಿ ಏಕರೂಪತೆ ಇರುವ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ಒಂದೇ ಹಂತದ ತೆರಿಗೆ ವ್ಯವಸ್ಥೆಯು ಸರಿಹೊಂದುತ್ತದೆ ಎಂದು ಅವರು ಹೇಳಿದ್ದಾರೆ.

ಈಗ ಶೇ 12ರಷ್ಟು ತೆರಿಗೆ ಇರುವ ಉತ್ಪನ್ನಗಳಾದ ಬೆಣ್ಣೆ, ಹಣ್ಣಿನರಸ, ಒಣಹಣ್ಣುಗಳು ಸೇರಿದಂತೆ ಈ ಹಂತದಲ್ಲಿನ ಶೇ 99ರಷ್ಟು ಉತ್ಪನ್ನಗಳು ಶೇ 5ರಷ್ಟು ತೆರಿಗೆಯ ಹಂತಕ್ಕೆ ಬರಲಿವೆ. ಈಗ ಶೇ 28ರಷ್ಟು ತೆರಿಗೆ ಇರುವ ಎಲೆಕ್ಟ್ರಾನಿಕ್ ಉತ್ಪನ್ನಗಳಾದ ಹವಾನಿಯಂತ್ರಕಗಳು, ಟಿ.ವಿ., ಫ್ರಿಜ್, ವಾಷಿಂಗ್ ಮೆಷಿನ್ನಂತಹವು ಶೇ 18ರಷ್ಟು ತೆರಿಗೆಯ ಹಂತಕ್ಕೆ ಬರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.