ಇಂಧನ ದರ ನಿಯಂತ್ರಣ ಮುಕ್ತಮರುಪರಿಶೀಲನೆ ಇಲ್ಲ: ಪ್ರಧಾನ್‌

7

ಇಂಧನ ದರ ನಿಯಂತ್ರಣ ಮುಕ್ತಮರುಪರಿಶೀಲನೆ ಇಲ್ಲ: ಪ್ರಧಾನ್‌

Published:
Updated:

ನವದೆಹಲಿ: ‘ಇಂಧನ ದರವನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು  ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

ಇಂಧನ ದರವನ್ನು ನಿಯಂತ್ರಣ ಮುಕ್ತಗೊಳಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳೇ ದರ ಪರಿಷ್ಕರಣೆ ಮಾಡುತ್ತಿವೆ. 

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ನಾಲ್ಕು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದರಿಂದ ಇಂಧನ ದರಗಳು ಏರಿಕೆಯಾಗುತ್ತಲೇ ಇವೆ. ಸರ್ಕಾರ ಎಕ್ಸೈಸ್‌ ಸುಂಕ ಕಡಿತ ಮಾಡಿದರೂ ದರ ಏರಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

‘ಒಪೆಕ್‌ ರಾಷ್ಟ್ರಗಳು ಜೂನ್‌ನಲ್ಲಿ ತೈಲ ಉತ್ಪಾದನೆಯನ್ನು  ದಿನಕ್ಕೆ 10 ಲಕ್ಷ ಬ್ಯಾರೆಲ್‌ನಷ್ಟು ಹೆಚ್ಚಿಸುವುದಾಗಿ ಹೇಳಿವೆ. ಆದರೆ ಅದನ್ನು ಜಾರಿಗೆ ತರುವ ಬಗ್ಗೆ ಅನುಮಾನವಿದೆ’ ಎಂದಿದ್ದಾರೆ.

ತೈಲ ಕಂಪನಿಗಳಿಗೆ ನಷ್ಟ; ಮೂಡೀಸ್‌: ಇಂಧನ ದರಗಳನ್ನು ₹2.50ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ತೈಲ ಕಂಪನಿಗಳಿಗೆ ತೆರಿಗೆ ಪೂರ್ವ ಗಳಿಕೆಯಲ್ಲಿ ₹ 6,500 ಕೋಟಿ ನಷ್ಟವಾಗಲಿದೆ ಎಂದು ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ಮೂಡೀಸ್‌ ಅಂದಾಜು ಮಾಡಿದೆ.

*
ನವೆಂಬರ್‌ನಲ್ಲಿ ಇರಾನ್‌ನಿಂದ ತೈಲ ಖರೀದಿಸಲಾಗುವುದು. ಎರಡು ಕಂಪನಿಗಳು ಪ್ರಸ್ತಾವ ಸಲ್ಲಿಸಿವೆ.
-ಧರ್ಮೇಂದ್ರ ಪ್ರಧಾನ್‌, ಟ್ರೋಲಿಯಂ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !