‘ಚಿನ್ನದ ಪ್ರತಿ ದಿನದ ಬೆಲೆ ನಿಗದಿ ವ್ಯವಸ್ಥೆ ಇಲ್ಲ’

7

‘ಚಿನ್ನದ ಪ್ರತಿ ದಿನದ ಬೆಲೆ ನಿಗದಿ ವ್ಯವಸ್ಥೆ ಇಲ್ಲ’

Published:
Updated:
Prajavani

ನವದೆಹಲಿ: ಚಿನ್ನದ ಪ್ರತಿ ದಿನದ ಬೆಲೆ ನಿಗದಿ ಮಾಡುವ ಯಾವುದೇ ಕ್ರಮಗಳಾಗಲಿ ಅಥವಾ ನಿರ್ದಿಷ್ಟ ವ್ಯವಸ್ಥೆಯಾಗಲಿ ಇಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ.

‘ದೇಶದಾದ್ಯಂತ ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ವ್ಯಾಪಕ ವಹಿವಾಟು ನಡೆಯುತ್ತದೆ. ಬೆಲೆಯು ಆಮದು ದರ, ಮೂಲ ಕಸ್ಟಮ್ಸ್‌ ಡ್ಯೂಟಿ, ಸಾಗಾಣಿಕಾ ವೆಚ್ಚ, ಮಾರಾಟ ಸ್ಥಳ, ಚಿನ್ನದ ಶುದ್ಧತೆ ಮತ್ತಿತರ ಸಂಗತಿಗಳನ್ನು ಆಧರಿಸಿರುತ್ತದೆ. ಈ ಕಾರಣಕ್ಕೆ ಪ್ರತಿ ದಿನ ನಿರ್ದಿಷ್ಟ ಬೆಲೆ ನಿಗದಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಗ್ರಾಹಕರ ವ್ಯವಹಾರ ಸಚಿವ ಸಿ. ಆರ್‌. ಚೌಧರಿ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಆಭರಣಗಳ ಮೇಲೆ ಚಿನ್ನದ ಶುದ್ಧತೆ ನಮೂದಿಸುವ ಹಾಲ್‌ಮಾರ್ಕ್‌ ಮುದ್ರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಭಾರತವು ವಿಶ್ವದಲ್ಲಿಯೇ ಚಿನ್ನದ ಅತಿದೊಡ್ಡ ಆಮದು ಮತ್ತು ಬಳಕೆದಾರ ದೇಶವಾಗಿದೆ. ಪ್ರತಿ ವರ್ಷ 700ಕ್ಕೂ ಹೆಚ್ಚು ಟನ್‌ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !