ಶುಕ್ರವಾರ, ಜುಲೈ 23, 2021
23 °C

ಐ.ಟಿ. ನೋಟಿಸ್: ಬೇಕಿಲ್ಲ ಖುದ್ದು ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

IT

ನವದೆಹಲಿ: ಆದಾಯ ತೆರಿಗೆ ವಿಚಾರವಾಗಿ ಪರಿಶೀಲನಾ ನೋಟಿಸ್ ಜಾರಿಯಾದರೆ, ಅದಕ್ಕೆ ಉತ್ತರ ನೀಡಲು ಸ್ಥಳೀಯ ಆದಾಯ ತೆರಿಗೆ ಇಲಾಖೆ ಅಧಿಕಾರಿಯನ್ನು ಖುದ್ದಾಗಿ ಭೇಟಿಯಾಗಬೇಕಾದ ಅಗತ್ಯ ಇಲ್ಲ.

ಇಂಟರ್ನೆಟ್ ಆಧಾರಿತ ಆದಾಯ ತೆರಿಗೆ ಪರಿಶೀಲನಾ ವ್ಯವಸ್ಥೆಯ ಮೂಲಕವೇ ಆ ನೋಟಿಸ್‌ಗೆ ಉತ್ತರ ನೀಡಬಹುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ, ಅದರ ಮೂಲಕವೇ ನೋಟಿಸ್‌ಗೆ ಉತ್ತರ ನೀಡಬಹುದು.

ವೆಬ್‌ಸೈಟ್‌ ಮೂಲಕ ನೀಡುವ ಉತ್ತರವನ್ನು ದೇಶದ ಬೇರೆ ಬೇರೆ ನಗರಗಳಲ್ಲಿ ಇರುವ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ‘ಈ ವ್ಯವಸ್ಥೆಯು ಆದಾಯ ತೆರಿಗೆ ಪಾವತಿಸುವ 58 ಸಾವಿರ ಜನರಿಗೆ ಈಗಾಗಲೇ ಸಹಾಯ ಮಾಡುತ್ತಿದೆ’ ಎಂದು ಇಲಾಖೆ ತಿಳಿಸಿದೆ.

ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕವೇ ನೋಟಿಸ್‌ಗೆ ಉತ್ತರ ನೀಡುವ ವ್ಯವಸ್ಥೆ ಮೂಲಕ ಕಳೆದ ವರ್ಷದ ಅಕ್ಟೋಬರ್‌ ನಂತರ ಒಟ್ಟು 7,116 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು