ಶನಿವಾರ, ಅಕ್ಟೋಬರ್ 19, 2019
27 °C

‘ವಿತ್ತೀಯ ಕೊರತೆ ಗುರಿ ಪರಿಷ್ಕರಣೆ ಇಲ್ಲ’

Published:
Updated:

ನವದೆಹಲಿ: ‘ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಗುರಿ (ಶೇ 3.3) ಪರಿಷ್ಕರಣೆ ಮಾಡುವ ಆಲೋಚನೆ ಇಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸ್ಪಷ್ಟಪಡಿಸಿದ್ದಾರೆ.

ಕಾರ್ಪೊರೇಟ್‌ ತೆರಿಗೆ ದರ ಕಡಿತದಿಂದ ವಿತ್ತೀಯ ಕೊರತೆ ಹಿಗ್ಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಅವರು ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ.

‘ವಿತ್ತೀಯ ಕೊರತೆ, ಸಾಲ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ಘೋಷಿಸಿರುವ ಗುರಿಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ವಾರ್ಷಿಕ ಬಜೆಟ್‌ಗೂ ಮುನ್ನವೇ ನಿರ್ಧಾರಕ್ಕೆ ಬರಲಾಗುವುದು’ ಎಂದು ಅವರು ಹೇಳಿದ್ದಾರೆ..

ಹೂಡಿಕೆ ಆಕರ್ಷಣೆ: ‘ಕಾರ್ಪೊರೇಟ್‌ ತೆರಿಗೆ ದರ ಇಳಿಕೆಯಿಂದ ಆ್ಯಪಲ್‌ನಂತಹ ದೈತ್ಯ ಕಂಪನಿಗಳು ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪನೆಗೆ ಸೂಕ್ತ ಅವಕಾಶ ಒದಗಿ ಬಂದಿದೆ ಎಂದು ಅವರು ತಿಳಿಸಿದ್ದಾರೆ.

Post Comments (+)