ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಬಾಕಿ ಇಲ್ಲ: ಕಾಫಿ ಡೇ

Last Updated 27 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ. ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿರುವ ಷೇರುಗಳನ್ನು ಮರಳಿ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾಫಿ ಡೇ ಎಂಟರ್‌ಪ್ರೈಸಸ್‌ ಹೇಳಿದೆ.

ತೆರಿಗೆ ಬಾಕಿಗೆ ಸಂಬಂಧಿಸಿದಂತೆ, ಮಾಹಿತಿ ತಂತ್ರಜ್ಞಾನ (ಐ.ಟಿ) ಕಂಪನಿ‘ಮೈಂಡ್‌ ಟ್ರೀ’ನಲ್ಲಿ, ಕೆಫೆ ಕಾಫಿ ಡೇ ವ್ಯವಸ್ಥಾಪಕ ನಿರ್ದೇಶಕ ವಿ.ಜಿ. ಸಿದ್ಧಾರ್ಥ ಮತ್ತು ಕಾಫಿ ಡೇ ಎಂಟರ್‌ಪ್ರೈಸಸ್‌ ಹೊಂದಿರುವ ಷೇರುಗಳಲ್ಲಿ ಕೆಲವನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಫಿ ಡೇ, ಎಲ್ಲಾ ತೆರಿಗೆಗಳನ್ನೂ ಪಾವತಿಸಲಾಗಿದ್ದು, ಪರಿಷ್ಕೃತ ರಿಟರ್ನ್ಸ್‌ ಸಹ ಸಲ್ಲಿಸಲಾಗಿದೆ ಎಂದು ತಿಳಿಸಿದೆ. ಸಂಸ್ಥೆಯಾಗಲಿ, ಅಂಗಸಂಸ್ಥೆಗಳಾಗಲಿ, ಪ್ರವರ್ತಕರಾಗಲಿ ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಷೇರುಪೇಟೆಗೆ ಸ್ಪಷ್ಟನೆ ನೀಡಿದೆ.

ಮೈಂಡ್‌ ಟ್ರೀನಲ್ಲಿ ಹೊಂದಿರುವ 74.90 ಲಕ್ಷ ಷೇರುಗಳನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿದೆ. ಇದರಲ್ಲಿ 22.20 ಲಕ್ಷ ಷೇರುಗಳು ಕಾಫಿ ಡೇ ಎಂಟರ್‌ಪ್ರೈಸಸ್‌ಗೆ ಸೇರಿದ್ದು, 52.70 ಲಕ್ಷ ಷೇರುಗಳು ಪ್ರವರ್ತಕ ಸಿದ್ಧಾರ್ಥ ಅವರದ್ದಾಗಿವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT