ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎ: ಹೊಸ ನಿಯಮ ಸಮತೋಲನದ ನಿರ್ಧಾರ

ರೇಟಿಂಗ್‌ ಸಂಸ್ಥೆ ಕ್ರಿಸಿಲ್‌, ಮೆರಿಲ್‌ ಲಿಂಚ್‌ ವಿಶ್ಲೇಷಣೆ
Last Updated 10 ಜೂನ್ 2019, 19:45 IST
ಅಕ್ಷರ ಗಾತ್ರ

ಮುಂಬೈ: ವಸೂಲಾಗದ ಸಾಲಗಳಿಗೆ (ಎನ್‌ಪಿಎ) ಸಂಬಂಧಿಸಿದಂತೆ ಆರ್‌ಬಿಐ ಹೊರಡಿಸಿರುವ ಪರಿಷ್ಕೃತ ಸುತ್ತೋಲೆಯು ವಾಣಿಜ್ಯ ಬ್ಯಾಂಕ್‌ಗಳು ಮತ್ತು ಸಾಲಗಾರರು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ.

ಹೊಸ ಸುತ್ತೋಲೆಯು ವಿವೇಕಯುತ ನಿರ್ಧಾರವಾಗಿದೆ ಎಂದು ಹಣಕಾಸು ಸಂಸ್ಥೆಗಳಿಗೆ ಮಾನದಂಡ ನೀಡುವ ಸಂಸ್ಥೆಗಳಾದ ಕ್ರಿಸಿಲ್ ಮತ್ತು ಅಮೆರಿಕದ ದಲ್ಲಾಳಿ ಸಂಸ್ಥೆ ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌ ಲಿಂಚ್‌ ವಿಶ್ಲೇಷಿಸಿವೆ.

ಹೊಸ ಸುತ್ತೋಲೆಯು ಸಮತೋಲನದ ನಿಯಂತ್ರಣ ಕ್ರಮವಾಗಿದೆ. ವಿದ್ಯುತ್‌ ಉತ್ಪಾದನಾ ವಲಯದ ಕಂಪನಿಗಳಲ್ಲಿ ಈಗ ಬಿಕ್ಕಟ್ಟಿನಿಂದ ಪಾರಾದ ನೆಮ್ಮದಿ ನೆಲೆಸಿದೆ.

ಈ ಕಂಪನಿಗಳು ₹ 1 ಲಕ್ಷ ಕೋಟಿ ಸಾಲ ಬಾಕಿ ಉಳಿಸಿಕೊಂಡಿವೆ. ಈ ಕಂಪನಿಗಳಿಗೆ ಸಾಲ ನೀಡಿರುವ ಬ್ಯಾಂಕ್‌ಗಳು ಕೂಡ ಹಳೆಯ ನಿಯಮದ ಪ್ರಕಾರ ಸಾಲ ವಸೂಲಿ ಮಾಡಲು ಮುಂದಾಗಿದ್ದರೆ ಗಮನಾರ್ಹ ಪ್ರಮಾಣದಲ್ಲಿ ನಷ್ಟಕ್ಕೆ ಎರವಾಗಬೇಕಾಗುತ್ತಿತ್ತು.

ದ್ವಿಪಕ್ಷೀಯ ನೆಲೆಯಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಅಥವಾ ಹರಾಜು ನಡೆಸುವ ಉದ್ದೇಶಕ್ಕೆ ‘ಎನ್‌ಸಿಎಲ್‌ಟಿ ಶಿಫಾರಸು ಮಾಡಲು ಬ್ಯಾಂಕ್‌ಗಳಿಗೆ ಸ್ವಾತಂತ್ರ್ಯ ನೀಡಿವೆ ಎಂದು ಅಭಿಪ್ರಾಯಪಟ್ಟಿದೆ.

ವಸೂಲಾಗದ ಸಾಲ ಖಾತೆಗಳಿಂದ ಬಾಕಿ ವಸೂಲಿಗೆ ಹೊಸ ನಿಯಮಗಳು ಸರಳವಾಗಿವೆ. ಪರಿಹಾರ ಕಂಡುಕೊಳ್ಳುವಾಗ ಎದುರಾ
ಗಲಿದ್ದ ತೀವ್ರ ವಿಳಂಬವೂ ದೂರವಾಗಿದೆ ಎಂದು ‘ಕ್ರಿಸಿಲ್‌’ ಹೇಳಿದೆ.

ತ್ವರಿತ ಬಾಕಿ ವಸೂಲಿ
ಎನ್‌ಪಿಎ ಖಾತೆಗಳಿಂದ ಬಾಕಿ ವಸೂಲಿ ಪ್ರಕ್ರಿಯೆ ತ್ವರಿತಗೊಳಿಸಲು ಹೊಸ ನಿಯಮಗಳಿಂದ ಸಾಧ್ಯವಾಗಲಿದೆ ಎಂದು ಸಶಕ್ತಿ ಸಮಿತಿ ಅಭಿಪ್ರಾಯಪಟ್ಟಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಎನ್‌ಪಿಎ ಸಂಬಂಧಿಸಿದಂತೆ ಈ ಸಮಿತಿ ರಚಿಸಲಾಗಿದೆ. ‘ಇದೊಂದು ಕಾರ್ಯಸಾಧ್ಯವಾದ ಮತ್ತು ಸರಿಯಾದ ದಿಕ್ಕಿನಲ್ಲಿ ಕೈಗೊಂಡ ನಿರ್ಧಾರವಾಗಿದೆ’ ಎಂದು ಸಮಿತಿ ಮುಖ್ಯಸ್ಥ ಸುನಿಲ್‌ ಮೆಹ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT