ತೈಲ ಉತ್ಪಾದನೆ ಇಳಿಕೆ ನಿರ್ಧಾರ: ದರ ಏರಿಕೆ ಸಾಧ್ಯತೆ

7
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಯುತ್ತಿರುವ ದರ

ತೈಲ ಉತ್ಪಾದನೆ ಇಳಿಕೆ ನಿರ್ಧಾರ: ದರ ಏರಿಕೆ ಸಾಧ್ಯತೆ

Published:
Updated:

ಅಬುಧಾಬಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆ ಕಾಣಲಾರಂಭಿಸಿದೆ. ಹೀಗಾಗಿ ಉತ್ಪಾದನೆ ತಗ್ಗಿಸಲು ‘ಒಪೆಕ್‌’ನ ಬಹುತೇಕ ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಿವೆ.

‘ಒಂದು ದಿನಕ್ಕೆ 5 ಲಕ್ಷದಿಂದ 10 ಲಕ್ಷ ಬ್ಯಾರೆಲ್‌ವರೆಗೆ ತೈಲ ಉತ್ಪಾದನೆ ತಗ್ಗಿಸುವ ಸಾಧ್ಯತೆ ಇದೆ. ಆದರೆ, ಖಚಿತವಾಗಿ ಇಷ್ಟೇ ಎಂದು ಹೇಳುವುದು ಸರಿಯಲ್ಲ’ ಎಂದು ಒಮನ್‌ ತೈಲ ಸಚಿವ ಮಹಮ್ಮದ್‌ ಬಿನ್‌ ಹಮದ್‌ ಅಲ್ ರುಮಿ ತಿಳಿಸಿದ್ದಾರೆ.

 ತೈಲ ಮಾರುಕಟ್ಟೆ ಮೇಲ್ವಿಚಾರಣಾ ಸಮಿತಿಯ ಸಭೆಯು ಭಾನುವಾರ ಇಲ್ಲಿ ನಡೆಯಿತು. ಕಚ್ಚಾ ತೈಲ ಉತ್ಪಾದಿಸುವ ಪ್ರಮುಖ ರಾಷ್ಟ್ರಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಕಚ್ಚಾ ತೈಲ ದರ ಇಳಿಕೆ ಕಾಣುತ್ತಿದೆ. ಅಕ್ಟೋಬರ್‌ನಲ್ಲಿ ನಾಲ್ಕು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ನವೆಂಬರ್‌ನಲ್ಲಿ ಇದುವರೆಗೆ ಒಟ್ಟಾರೆ ಮೌಲ್ಯದ ಐದರಷ್ಟು ಇಳಿಕೆಯಾಗಿದೆ. ಪೂರೈಕೆಯಲ್ಲಿನ ಹೆಚ್ಚಳ ಮತ್ತು ಬೇಡಿಕೆ ತಗ್ಗುವ ಆತಂಕದಿಂದಾಗಿ ತೈಲ ದರ ಇಳಿಮುಖವಾಗಿದೆ.

ಬ್ರೆಂಟ್‌ ಕಚ್ಚಾ ತೈಲ ದರ ಶುಕ್ರವಾರ ಒಂದು ಬ್ಯಾರೆಲ್‌ಗೆ 70 ಡಾಲರ್‌ಗೆ ಇಳಿಕೆಯಾಗಿತ್ತು. ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲ ದರವು 9 ತಿಂಗಳ ಕನಿಷ್ಠ ಮಟ್ಟವಾದ ಒಂದು ಬ್ಯಾರೆಲ್‌ಗೆ 60 ಡಾಲರ್‌ಗಿಂತಲೂ ಕೆಳಗಿಳಿದಿದೆ.

ತೈಲ ದರ ಇಳಿಕೆಯನ್ನು ನಿಯಂತ್ರಿಸುವ ಬಗ್ಗೆ ಉತ್ಪಾದಕರು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಉತ್ಪಾದನೆ ತಗ್ಗಿಸದೇ ಇದ್ದರೆ ತೈಲ ದರ ಇನ್ನಷ್ಟು ಕುಸಿತ ಕಾಣಲಿದೆ ಎಂದು ಜರ್ಮನಿಯ ಕಾಮರ್ಸ್‌ಬ್ಯಾಂಕ್‌ ಅಂದಾಜಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !