ಮಂಗಳವಾರ, ಜೂನ್ 22, 2021
22 °C

ಶೀಘ್ರವೇ ಮನೆಬಾಗಿಲಿಗೆ ಆಮ್ಲಜನಕದ ಕಾನ್ಸನ್‌ಟ್ರೇಟರ್‌: ಓಲಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರಿನಲ್ಲಿ ಆಮ್ಲಜನಕದ ಕಾನ್ಸನ್‌ಟ್ರೇಟರ್‌ ಅನ್ನು ಗ್ರಾಹಕರ ಮನೆಬಾಗಿಲಿಗೆ ಉಚಿತವಾಗಿ ಪೂರೈಕೆ ಮಾಡುವ ಸೇವೆಯನ್ನು ಶೀಘ್ರವೇ ಆರಂಭಿಸುವುದಾಗಿ  ಓಲಾ ಫೌಂಡೇಷನ್‌ ಸೋಮವಾರ ತಿಳಿಸಿದೆ. ಮೊದಲ ಹಂತದಲ್ಲಿ 500 ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ಗಳು ಲಭ್ಯವಿರಲಿವೆ ಎಂದು ಹೇಳಿದೆ.

ಈ ಸೇವೆಗಾಗಿ ದೇಣಿಗೆ ನೀಡುವ ವೇದಿಕೆ ಆಗಿರುವ ‘ಗಿವ್‌ ಇಂಡಿಯಾ’ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಓಲಾ ತಿಳಿಸಿದೆ.

ಓಲಾ ಆ್ಯಪ್‌ ಮೂಲಕ ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗೆ ಮನವಿ ಸಲ್ಲಿಸಬೇಕು. ಈ ವೇಳೆ ಕೆಲವು ಸಾಮಾನ್ಯ ವಿವರಗಳನ್ನು ನೀಡಬೇಕಾಗುತ್ತದೆ. ಮನವಿ ಸ್ವೀಕಾರ ಆದ ಬಳಿಕ ವಿಶೇಷ ತರಬೇತಿ ಪಡೆದಿರುವ ಓಲಾ ಚಾಲಕ ಗ್ರಾಹಕರ ಮನೆ ಬಾಗಿಲಿಗೆ ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ತಲುಪಿಸಲಿದ್ದಾರೆ. ರೋಗಿಯ ಆರೋಗ್ಯ ಸುಧಾರಿಸಿದ ಬಳಿಕ ಓಲಾ ಅದನ್ನು ಹಿಂದಕ್ಕೆ ಪಡೆದು ‘ಗಿವ್‌ ಇಂಡಿಯಾ’ ಸಂಸ್ಥೆಗೆ ಮರಳಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು