ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎನ್‌ಜಿಸಿ ನಿವ್ವಳ ಲಾಭ ₹ 1,378 ಕೋಟಿ

Last Updated 13 ಫೆಬ್ರುವರಿ 2021, 16:31 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹ 1,378 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 4,226 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ 67.4ರಷ್ಟು ಇಳಿಕೆ ಕಂಡುಬಂದಿದೆ. ತೈಲ ಮತ್ತು ಅನಿಲ ದರದಲ್ಲಿ ಇಳಿಕೆ ಆಗಿರುವುದು ಲಾಭದ ಮೇಲೆ ಪರಿಣಾಮ ಉಂಟಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟಾರೆ ವಹಿವಾಟು ಶೇ 28ರಷ್ಟು ಇಳಿಕೆಯಾಗಿದ್ದು, ₹ 17,024 ಕೋಟಿಗಳಿಗೆ ತಲುಪಿದೆ.

ಮಧ್ಯಂತರ ಲಾಭಾಂಶ: ₹ 5ರ ಮುಖಬೆಲೆಯ ಪ್ರತಿ ಷೇರಿಗೆ ₹ 1.75ರಷ್ಟು ಮಧ್ಯಂತರ ಲಾಭಾಂಶವನ್ನು ನೀಡಲು ಶನಿವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಇದರ ಒಟ್ಟಾರೆ ಮೊತ್ತವು ₹ 2,201.55 ಕೋಟಿಗಳಷ್ಟಾಗುವ ಅಂದಾಜು ಮಾಡಲಾಗಿದೆ ಎಂದು ಹೇಳಿದೆ.

ಇಂಡಿಯನ್‌ ಗ್ಯಾಸ್‌ ಎಕ್ಸ್‌ಚೇಂಜ್ ಲಿಮಿಟೆಡ್‌ನಲ್ಲಿ ಶೇ 5ರಷ್ಟು ಷೇರನ್ನು ಖರೀದಿ ಮಾಡಲು ಸಹ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT