ತೈಲ ಉತ್ಪಾದನೆ ತಗ್ಗಿಸಲು ರಷ್ಯಾ ಅಡ್ಡಿ

7
ಮಾರುಕಟ್ಟೆಗೆ ಹೆಚ್ಚಿದ ಪೂರೈಕೆ , ದಿನಕ್ಕೆ 13 ಲಕ್ಷ ಬ್ಯಾರೆಲ್‌ ತಗ್ಗಿಸಲು ‘ಒಪೆಕ್‌’ ಸಿದ್ಧತೆ

ತೈಲ ಉತ್ಪಾದನೆ ತಗ್ಗಿಸಲು ರಷ್ಯಾ ಅಡ್ಡಿ

Published:
Updated:
Deccan Herald

ವಿಯೆನ್ನಾ: ಕಚ್ಚಾ ತೈಲ ಉತ್ಪಾದನೆ ತಗ್ಗಿಸುವ ‘ಒಪೆಕ್‌’ ಸದಸ್ಯ ರಾಷ್ಟ್ರಗಳ ನಿರ್ಧಾರಕ್ಕೆ ರಷ್ಯಾ ಸದ್ಯದ ಮಟ್ಟಿಗೆ ಅಡ್ಡಿಯಾಗಿದೆ ಎಂದು ಮೂಲಗಳು ತಿಳಿಸಿವೆ.

‘ಒಪೆಕ್‌’ ಸದಸ್ಯ ರಾಷ್ಟ್ರಗಳು ದಿನಕ್ಕೆ 13 ಲಕ್ಷ ಬ್ಯಾರೆಲ್‌ಗಳಷ್ಟು ಉತ್ಪಾದನೆ ತಗ್ಗಿಸಲು ಸಿದ್ಧತೆ ನಡೆಸುತ್ತಿವೆ. ಆದರೆ, ಅತಿ ಹೆಚ್ಚು ತೈಲ ಉತ್ಪಾದಿಸುವ ಎರಡನೇ ದೇಶವಾಗಿರುವ ರಷ್ಯಾ, ಉತ್ಪಾದನೆ ತಗ್ಗಿಸಲು ಒಪ್ಪಿಗೆ ನೀಡಿಲ್ಲ. ಹೀಗಾಗಿ ‘ಒಪೆಕ್‌’ ನಿರ್ಧಾರಕ್ಕೆ ಹಿನ್ನಡೆಯಾದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗೆ ತೈಲ ಪೂರೈಕೆ ಮಿತಿ ಮೀರಿದೆ. ಇದರಿಂದ ದರದಲ್ಲಿ ನಿರಂತರ ಇಳಿಕೆಯಾಗತ್ತಿದೆ. ಅಮೆರಿಕದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ತೈಲ ಉತ್ಪಾದನೆ ಆಗುತ್ತಿದೆ. ಹೀಗಾಗಿ ಉತ್ಪಾದನೆ ತಗ್ಗಿಸುವ ನಿರ್ಧಾರ ಕೈಗೊಳ್ಳಲು ತೈಲ ಉತ್ಪಾದಿಸುವ ಪ್ರಮುಖ ದೇಶಗಳು ಸಭೆ ಸೇರಲು ನಿರ್ಧರಿಸಿವೆ. 

‘ಒಪೆಕ್‌ ’ಸದಸ್ಯ ರಾಷ್ಟ್ರಗಳು ವಿಯೆನ್ನಾದಲ್ಲಿ ಗುರುವಾರ ಸಭೆ ಸೇರಲಿವೆ. ಆ ಬಳಿಕ ಶುಕ್ರವಾರ ರಷ್ಯಾದೊಂದಿಗೆ ಸಭೆ ನಡೆಯಲಿದೆ. 

ಅತಿ ಹೆಚ್ಚು ಉತ್ಪಾದನೆ ಮಾಡುವ ಸೌದಿ ಅರೇಬಿಯಾ, ಉತ್ಪಾದನೆ ತಗ್ಗಿಸುವ ಅಗತ್ಯವಿದೆ ಎಂದು ಹೇಳುತ್ತಿದೆ. ಆದರೆ, ಜನರಿಗೆ ಕಡಿಮೆ ದರಕ್ಕೆ ಇಂಧನ ದೊರಕುವಂತೆ ಮಾಡಲು ಉತ್ಪಾದನೆ ತಗ್ಗಿಸದೇ ಇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒತ್ತಡ ಹೇರುತ್ತಿದ್ದಾರೆ.

ಸತತ 2ನೇ ದಿನವೂ ಮಾರುಕಟ್ಟೆಯಲ್ಲಿ ತೈಲ ದರ ಏರಿಯಾಗಿದೆ. ಮಂಗಳವಾರ ಬ್ರೆಂಟ್‌ ಕಚ್ಚಾ ತೈಲ ದರ ಶೇ 2.27ರಷ್ಟು ಏರಿಕೆಯಾಗಿ ಒಂದು ಬ್ಯಾರೆಲ್‌ಗೆ 63.09 ಡಾಲರ್‌ಗಳಿಗೆ ತಲುಪಿದೆ.

ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮಿಡಿಯೇಟ್ (ಡಬ್ಲ್ಯುಟಿಐ) ದರ್ಜೆಯ ಕಚ್ಚಾ ತೈಲ ದರ ಶೇ 0.5ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 53.20 ಡಾಲರ್‌ಗೆ ತಲುಪಿದೆ.

 

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !