ಕ್ಲೆನ್‌ಪ್ಯಾಕ್ಸ್‌ನಲ್ಲಿ ಸೌರಶಕ್ತಿ ಘಟಕ

ಶನಿವಾರ, ಏಪ್ರಿಲ್ 20, 2019
25 °C

ಕ್ಲೆನ್‌ಪ್ಯಾಕ್ಸ್‌ನಲ್ಲಿ ಸೌರಶಕ್ತಿ ಘಟಕ

Published:
Updated:
Prajavani

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೈಗಾರಿಕಾ ಘಟಕಗಳನ್ನು ಹೊಂದಿರುವ ಕ್ಲೆನ್‌ಪ್ಯಾಕ್ಸ್‌ ಸಂಸ್ಥೆಗಾಗಿ ಆರ್ಬ್ ಎನರ್ಜಿ ಸಂಸ್ಥೆಯು ಮೂರನೇ ಹಂತದ 7.63 ಮೆಗಾವಾಟ್ ಸಾಮರ್ಥ್ಯದ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಈ ಹಂತದಲ್ಲಿ ಹಾಸನ, ಬೆಂಗಳೂರು ಮತ್ತು ತಮಿಳುನಾಡಿನ ಕೃಷ್ಣಗಿರಿಯಲ್ಲಿ ತಲಾ 3 ಮೆಗಾವಾಟ್ ಸಾಮರ್ಥ್ಯದ ಘಟಕಗಳನ್ನು ಆರಂಭಿಸಲಿದೆ.

ಸಂಸ್ಥೆಯು, ಮದ್ದೂರಿನಲ್ಲಿ 3.63 ಮೆಗಾವಾಟ್‌ ಮತ್ತು ಹಾಸನದಲ್ಲಿ 1 ಮೆಗಾವಾಟ್‌ ಸಾಮರ್ಥ್ಯದ ಮೇಲ್ಚಾವಣಿ ಸೌರಶಕ್ತಿ ಘಟಕಗಳನ್ನು ಹೊಂದಿದೆ. 

ಗೊಬ್ಬರ ಚೀಲಗಳ ತಯಾರಿಕೆ ಮತ್ತು ರಫ್ತು ಮಾಡುವ ಕ್ಲೆನ್‌ಪ್ಯಾಕ್ಸ್‌ಗೆ ಈ ಘಟಕದಿಂದ ವಾರ್ಷಿಕ ₹ 6.5 ಕೋಟಿಗಿಂತಲೂ ಹೆಚ್ಚು ಹಣ ಉಳಿತಾಯವಾಗಲಿದ್ದು, ಇದಕ್ಕಾಗಿ ಹೂಡಿದ ಬಂಡವಾಳ ಮೂರು ವರ್ಷಗಳಲ್ಲಿ ಹಿಂಪಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ. 

‘ವಾಣಿಜ್ಯ ಉದ್ದೇಶಗಳಿಗಾಗಿ ಮತ್ತು ಕೈಗಾರಿಕೆಗಳನ್ನು ನಡೆಸಲು ಪಡೆಯುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ₹ 7ರಿಂದ ₹ 9ರವರೆಗೆ ಪಾವತಿಸಬೇಕಾಗುತ್ತದೆ. ಇಂತಹ ಮೇಲ್ಚಾವಣಿ ಸೌರಶಕ್ತಿ ಘಟಕಗಳನ್ನು ಸ್ಥಾಪಿಸುವುದರಿಂದ ಕೈಗಾರಿಕೆಗಳಿಗೆ ಪ್ರಯೋಜನ ಆಗಲಿದೆ. ಇದು ಕೈಗಾರಿಕೆಗಳ ಅಭಿವೃದ್ಧಿಗೂ ನೆರವಾಗುತ್ತದೆ’ ಎಂದು ಆರ್ಬ್ ಎನರ್ಜಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇಮಿಯರ್ ಮಿಲ್ಲರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !