ಶನಿವಾರ, ಜುಲೈ 31, 2021
26 °C

 ಒಟಿಒ ಕ್ಯಾಪಿಟಲ್‌ ಪಾಲುದಾರಿಕೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಹನಗಳ ಬಾಡಿಗೆ ನೀಡುವ ವಹಿವಾಟಿನ ನವೋದ್ಯಮವಾಗಿರುವ ಒಟಿಒ ಕ್ಯಾಪಿಟಲ್‌ ಜತೆಗೆ ಡೀಲರ್‌ಗಳ ಪಾಲುದಾರಿಕೆಯು ಏರಿಕೆ ದಾಖಲಿಸುತ್ತಿದೆ.

ಕೋವಿಡ್‌ ಪಿಡುಗು ಸೃಷ್ಟಿಸಿರುವ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಿಂದಾಗಿ ಗ್ರಾಹಕರು ಹೊಸ ವಾಹನ ಖರೀದಿಸಲು ಸಾಲ ಪಡೆಯುವ ಬದಲಿಗೆ ವಾಹನಗಳನ್ನು ಬಾಡಿಗೆಗೆ ಪಡೆಯುವುದೂ ಸೇರಿದಂತೆ ಪರ್ಯಾಯ ವಿಧಾನಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಬೈಕ್‌ ಮತ್ತು ಸ್ಕೂಟರ್‌ಗಳ ಬಾಡಿಗೆಗೆ ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚುತ್ತಿದೆ. ವಾಹನ ಮಾಲೀಕತ್ವದ ತಿಂಗಳ ಕಂತು ಯೋಜನೆಯಡಿ (ಒಎಂಐ) ಬೈಕ್‌ ಡೀಲರ್‌ಶಿಪ್‌ಗಳಲ್ಲಿ ಬಾಡಿಗೆ ಪಡೆಯಬಹುದು ಎಂದು ಸ್ಟಾರ್ಟ್‌ಅಪ್‌ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.