ಭಾನುವಾರ, ಮಾರ್ಚ್ 26, 2023
23 °C

ಓಯೊ ಕಂಪನಿ ಸಂಸ್ಥಾಪಕ ರಿತೇಶ್ ಅಗರ್‌ವಾಲ್ ವಿವಾಹ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಹಾಸ್ಪಿಟಾಲಿಟಿ ಕ್ಷೇತ್ರದ ಜನಪ್ರಿಯ ಸ್ಟಾರ್ಟ್‌ಅಪ್ ಕಂಪನಿ ‘ಓಯೊ’ದ ಸಂಸ್ಥಾಪಕ ಹಾಗೂ ಸಿಇಒ ರಿತೇಶ್ ಅಗರವಾಲ್ ಸಪ್ತಪದಿ ತುಳಿದಿದ್ದಾರೆ.

ಅವರು ದೆಹಲಿಯ ಗೀತಾಂಶ ಸೂದ್ ಅವರನ್ನು ಇತ್ತೀಚೆಗೆ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಆರತಕ್ಷತೆ ನಡೆಯಿತು.

ರಿತೇಶ್ ದಂಪತಿ ಆರತಕ್ಷತೆಗೆ ಅನೇಕ ಗಣ್ಯಾತಿಗಣ್ಯರು ಆಗಮಿಸಿದ್ದು ವಿಶೇಷವಾಗಿತ್ತು. ಜಪಾನ್‌ನ ಜಾಗತಿಕ ಹೂಡಿಕೆ ಕಂಪನಿಯಾದ ‘ಸಾಫ್ಟ್‌ಬ್ಯಾಂಕ್‌’ನ ಸಿಇಒ ಮಸಾಯೋಶಿ ಸನ್ ಆಗಮಿಸಿದ್ದು ವೀಶೇಷವಾಗಿತ್ತು.

ಈ ವೇಳೆ ರಿತೇಶ್ ದಂಪತಿ ಮಸಾಯೋಶಿ ಸನ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಹಾಗೂ ಅನೇಕ ಸ್ಟಾರ್ಟ್‌ ಕಂಪನಿಳ ಸ್ಥಾಪಕರು ರಿತೇಶ್ ಆರತಕ್ಷತೆಗೆ ಬಂದು ಹಾರೈಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಸಿಂಗ್ ಪಟೇಲ್ ಕೂಡ ಭಾಗಿಯಾಗಿದ್ದರು.

ಇನ್ನೊಂದು ವಿಶೇಷವೆಂದರೆ ಮಸಾಯೋಶಿ ಸನ್ ಅವರು ರಿತೇಶ್ ಮದುವೆಯಲ್ಲಿ ಭಾರತದ ಪ್ರಮುಖ ಸ್ಟಾರ್ಟ್‌ಅಪ್ ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮಾರವಾಡಿ ಕುಟುಂಬದ ಹಿನ್ನೆಲೆ ಹೊಂದಿರುವ ಒಡಿಶಾದ ರಿತೇಶ್ ಅಗರವಾಲ್, 2013 ರಲ್ಲಿ ಓಯೊ ಕಂಪನಿ ಸ್ಥಾಪಿಸಿದ್ದಾರೆ. ‘ಓಯೊ ಹೋಟೆಲ್ ಮತ್ತು ರೂಮ್ಸ್’ ಹೆಸರಿನಲ್ಲಿ ಇದು ವ್ಯವಹಾರ ಮಾಡುತ್ತಿದ್ದು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಭಾರತವೂ ಸೇರಿದಂತೆ, ಅಮೆರಿಕ, ನೇಪಾಳ, ಯುಎಇ, ಚೀನಾ, ಮಲೇಷಿಯಾ, ಇಂಡೋನೇಷಿಯಾವು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸೇವೆ ನೀಡುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು